ಕ್ಯಾನ್ಸರ್ ಕಾಯಿಲೆಗೆ ಫಾಸ್ಟ್ ಟ್ರ್ಯಾಕ್ ಟ್ರೀಟ್‌ಮೆಂಟ್: ಕಿದ್ವಾಯಿ ಹಾಸ್ಪಿಟಲ್‌ನಲ್ಲಿ ಚಿಕಿತ್ಸೆಗೆ ಹೊಸ ಟೆಕ್ನಾಜಲಿ !

Aug 29, 2023, 12:04 PM IST

ಕ್ಯಾನ್ಸರ್ ಅನ್ನೋ ಮಾರಣಾಂತಿಕ ಕಾಯಿಲೆ ವಕ್ಕರಿಸಿದ್ರೆ ಎಂಥವರ ಜಂಘಾಬಲವೂ ಉಡುಗಿಹೋಗುತ್ತದೆ. ಯಾಕಂದ್ರೆ  ಮಾರಣಾಂತಿಕ ಕಾಯಿಲೆ 
ಕ್ಯಾನ್ಸರ್ ವಿರುದ್ಧ ಸೆಣೆಸಿ ಗುಣಮುಖವಾಗುವುದು ನಿಜಕ್ಕೂ ಮರುಹುಟ್ಟು ಪಡೆದಂತೆಯೇ ಸರಿ. ಇನ್ನು ಕ್ಯಾನ್ಸರ್(Cancer) ಗುಣಮುಖವಾಗಲು ನೀಡುವ ಕಠಿಣ ಹಾಗೂ ಸುದೀರ್ಘ ಚಿಕಿತ್ಸೆಯೂ ರೋಗಿಗಳನ್ನ ಜರ್ಝರಿತಗೊಳಿಸುತ್ತಿದೆ. ಆದ್ರೆ ಸದ್ಯ  ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆ(Kidwai Hospital) ರೋಗಿಗಳ ಕಷ್ಟ ತಗ್ಗಿಸಲು ಹೊಸ ಟೆಕ್ನಾಲಜಿ ಅಳವಡಿಕೆಗೆ ಸಜ್ಜಾಗಿದೆ. ಫಾಸ್ಟ್ ಟ್ರ್ಯಾಕ್ ಟ್ರೀಟ್ಮೆಂಟ್(fast track treatment ) ಮೂಲಕ ಕ್ಯಾನ್ಸರ್ ಪತ್ತೆ ಹಚ್ಚಲು ಮುಂದಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಫಾಸ್ಟ್ ಟ್ರ್ಯಾಕ್ ಟ್ರೀಟ್ಮೆಂಟ್ ಯೋಜನೆ ಜಾರಿಗೆ ಬರಲಿದೆ. ಈಗಾಗಲೇ ಸುಮಾರು 70 ರಿಕ್ಲೈನರ್ ಚೇರ್‌ಗಳನ್ನ ಅಳವಡಿಕೆ ಮಾಡಲಾಗಿದೆ. ಫಾಸ್ಟ್ ಟ್ರ್ಯಾಕ್ ಟ್ರೀಟ್ಮೆಂಟ್ ವ್ಯವಸ್ಥೆಯಡಿ ರೋಗಿಗಳ ಎಕ್ಸಾಮಿನ್, ಬಿಲ್ಲಿಂಗ್ ಸೇರಿದಂತೆ ಎಲ್ಲ ಪ್ರಕ್ರಿಯೆಗಳು ಒಂದೇ ಕಡೆ ನಡೆಯಲಿದೆ. ಬಳಿಕ ರೋಗಿಯ ಎಕ್ಸಾಮಿನ್ ಡೇಟಾ  ಫಾಸ್ಟ್ ಟ್ರ್ಯಾಕ್ ಸಿಸ್ಟಮ್ನಲ್ಲಿ ಅಪ್ಲೋಡ್ ಆಗಲಿದೆ. ಇದರಿಂದ ಕೇವಲ ಒಂದೇ ದಿನದಲ್ಲಿ ಕ್ಯಾನ್ಸರ್‌ ರೋಗ ಪತ್ತೆ ಹಚ್ಚಬಹುದು ಅಂತಾರೆ ಡಾ.ಲೋಕೇಶ್.

ಇದನ್ನೂ ವೀಕ್ಷಿಸಿ:  ರಸ್ತೆ ಕಾಮಗಾರಿ ಗಲಾಟೆಯಲ್ಲಿ ಕೊಲೆಗೆ ಸ್ಕೆಚ್: ತಾ.ಪಂ. ಮಾಜಿ ಸದಸ್ಯನ ಹತ್ಯೆಗೆ 2 ಲಕ್ಷ ಸುಪಾರಿ !