Oct 4, 2023, 2:37 PM IST
ಇವತ್ತಿನ ಈ ಸುದ್ದಿ ನಿಜಕ್ಕೂ ಆಘಾತಕಾರಿ.. ಆತಂಕಕಾರಿ.. ಈ ಬಾರಿ ಸರ್ಕಾರ ಕೈಗೆತ್ತಿಕೊಳ್ಳೋಕೆ ನೋಡ್ತಾ ಇರೋ ಅದೊಂದು ತೀರ್ಮಾನ, ಡಿಸಿಎಂ ಡಿಕೆ ಶಿವಕುಮಾರ್(D.K.Shivakumar) ಅವರ ಒಂದು ನಡೆ, ಜನಸಾಮಾನ್ಯರಲ್ಲಿ ಒಂದು ರೀತಿಯ ಆತಂಕದ ಕಾರ್ಮೋಡ ಮೂಡಿಸಿದೆ. ಅವತ್ತಿನ ಆ ದಿನವನ್ನ ಬರೀ ಡಿಜೆ ಹಳ್ಳಿ, ಕೆಜಿ ಹಳ್ಳಿ ಜನ ಮಾತ್ರವೇ ಅಲ್ಲ. ಇಡೀ ಬೆಂಗಳೂರು(Bengaluru), ಬೆಂಗಳೂರೇನು, ಇಡೀ ಕರ್ನಾಟಕ, ಕರ್ನಾಟಕ ಅಷ್ಟೇ ಯಾಕೆ, ಇಡೀ ದೇಶವೇ ಮರೆಯೋ ಹಾಗಿಲ್ಲ. ಜಗತ್ತೆಲ್ಲಾ ಕೋವಿಡ್ ಅನ್ನೋ ಹೆಮ್ಮಾರಿಯಿಂದ ಹೇಗಪ್ಪಾ ಬಚಾವ್ ಆಗೋದು ಅಂತ ಯೋಚನೆಲಿ ಮುಳುಗಿದ್ರೆ, ಬೆಂಗಳೂರಿನ ಪುಲಕೇಶಿನಗರ ಕ್ಷೇತ್ರ ಮಾತ್ರ, ಬೆಂಕಿಯಲ್ಲಿ ಮುಳುಗಿಹೋಗಿತ್ತು. ಒಂದು ಫೇಸ್ಬುಕ್ ಪೋಸ್ಟಿನ ವಿರುದ್ಧ ಶುರುವಾಗಿದ್ದ ಪ್ರತಿಭಟನೆ, ನೋಡನೋಡುತ್ತಲೇ ಹಿಂಸಾತ್ಮಕವಾಯ್ತು. ಅದರ ಪ್ರತಿಫಲವಾಗಿ, ಪುಲಕೇಶಿನಗರದ ವಿಧಾನಸಭಾ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ್ ಅವರ ಮನೆಗೆ ಬೆಂಕಿ ಹಚ್ಚಿದ್ರು.ಬರೀ ಶಾಸಕರ ಮನೆಯಷ್ಟೇ ಅಲ್ಲ, ಅಲ್ಲಿದ್ದ ಪೋಲಿಸ್ ಠಾಣೆಗೂ ಬೆಂಕಿ ಇಟ್ಟಿದ್ರು. ಅವತ್ತು ಈ ಘಟನೆ ರಾಜ್ಯ ರಾಜಕೀಯದಲ್ಲೂ ದೊಡ್ಡ ಭೂಕಂಪ ಸೃಷ್ಟಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾಯಕರನ್ನು ಬಿಡುವಂತೆ ತನ್ವೀರ್ ಸೇಠ್ ಪತ್ರ ಬರೆದಿದ್ದರು. ಇದೀಗ ಡಿಸಿಎಂ ಡಿ.ಕೆ. ಶಿವಕುಮಾರ್ ಹುಬ್ಬಳ್ಳಿ ಗಲಭೆ ಪ್ರಕರಣದ(Hubli riots case) ಅಮಾಯಕರನ್ನು ಬಿಡುವಂತೆ ಪತ್ರ ಬರೆದಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ವೀಕ್ಷಿಸಿ: ಕಲ್ಲು ಹೊಡೆದ್ರು..ಆವಾಜ್ ಹಾಕಿದ್ರು..ಪೊಲೀಸರಿಗೇ ಹೆದರಿಸಿದ್ರು: ರಾಗಿಗುಡ್ಡದ 8ನೇ ಕ್ರಾಸ್‌ನಲ್ಲಿ ನಿಜಕ್ಕೂ ಆಗಿದ್ದೇನು ?