ರಾಜಧಾನಿಯಲ್ಲಿ ಡೆಂಗಿ ರುದ್ರ ನರ್ತನ: ಮಕ್ಕಳಲ್ಲೂ ಹೆಚ್ಚಿದ ಪ್ರಕರಣಗಳು..!

Sep 5, 2023, 10:11 AM IST

ಸಿಲಿಕಾನ್ ಸಿಟಿ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳು ಸದ್ಯ ಸಖತ್ ರಶ್ ಆಗಿವೆ. ಬಿಟ್ಟು ಬಿಟ್ಟು ಬರುತ್ತಿರುವ ಜಿಟಿ ಜಿಟಿ ಮಳೆಯಿಂದ(Rain) ನಗರದಲ್ಲಿ ವೈರಲ್ ಫೀವರ್ ಕಾಟ ಹೆಚ್ಚಾಗಿದೆ. ಜ್ವರ(Fever), ಶೀತ, ವೈರಲ್ ಜ್ವರಗಳ ಜೊತೆ  ಡೆಂಗಿ(Dengue) ಪ್ರಕರಣಗಳು ಜಾಸ್ತಿಯಾಗ್ತಿದೆ. ಜುಲೈ 1ರಿಂದ ಜುಲೈ 30ರ ವರೆಗೆ ಬೆಂಗಳೂರಲ್ಲಿ 1,649 ಪ್ರಕರಣ ದಾಖಲಾಗಿದೆ. ಆಗಸ್ಟ್‌ನಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದ್ದ ಡೆಂಗ್ಯೂ ಪ್ರಕರಣಗಳು, ಮೊನ್ನೆ ಸುರಿದ ಮಳೆಯಿಂದ ಮತ್ತೆ ಹೆಚ್ಚಳವಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಶೇಕಡಾ 22 ರಷ್ಟು ಡೆಂಗ್ಯೂ ರೋಗಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಬೆಂಗಳೂರೊಂದರಲ್ಲೇ 2,969 ಜನರಿಗೆ ಡೆಂಗ್ಯೂ ಕಾಡುತ್ತಿದೆ. ಇನ್ನು ಮಕ್ಕಳಲ್ಲೂ ಡೆಂಗಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದು, ಮಕ್ಕಳ ಬಗ್ಗೆ ನಿಗಾ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. 

ಇದನ್ನೂ ವೀಕ್ಷಿಸಿ:  ಅಶ್ಲೀಲ ವಿಡಿಯೋ ಬೆದರಿಕೆಗೆ ಯುವತಿ ಸೂಸೈಡ್: ಅಪ್ರಾಪ್ತೆ ಬಲಿ ಪಡೆದ ಕಿರಾತಕರು !