Jul 30, 2023, 10:31 AM IST
ಚುನಾವಣೆ ವೇಳೆ ಬಿಜೆಪಿ 40 ಪರ್ಸೆಂಟ್ ಸರ್ಕಾರ(40% commission) ಎಂದು ಕಾಂಗ್ರೆಸ್(Congress) ಆರೋಪ ಮಾಡಿತ್ತು. ಇದೀಗ ಈ ಆರೋಪದ ತನಿಖೆಗೆ ಸರ್ಕಾರ ತೀರ್ಮಾನ ಮಾಡಿದೆ. ಈ ಮೂಲಕ ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್ ಸರ್ಕಾರ ಸಮರದ ಅಖಾಡಕ್ಕಿಳಿದಿದೆ. ಈ ಬಗ್ಗೆ ಬಿಜೆಪಿ(BJP) ಸರ್ಕಾರದ ಅವಧಿಯಲ್ಲಿ ಮಹಾ ಸಮರವನ್ನೇ ಕಾಂಗ್ರೆಸ್ ನಡೆಸಿತ್ತು. ಸರ್ಕಾರ ರಚನೆ ಬಳಿಕ ಸಿದ್ದರಾಮಯ್ಯ(Siddaramaiah) ಸರ್ಕಾರ ತಣ್ಣಗಾಗಿತ್ತು. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿ ಎಂದು ಬಿಜೆಪಿ ನಾಯಕರಿಂದಲೇ ಒತ್ತಾಯ ಕೇಳಿಬಂದಿತ್ತು. ಅಲ್ಲದೇ ಮೌನ ಮುರಿದು ತನಿಖೆ ಮಾಡಲಿ ಎಂದು ಸರ್ಕಾರಕ್ಕೆ ಸವಾಲ್ ಹಾಕಿದ್ದರು. ಸಂಸದ ಪ್ರತಾಪ್ ಸಿಂಹ, ಸಿಟಿ ರವಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಬಿಜೆಪಿ ಒತ್ತಾಯದ ಬೆನ್ನಲ್ಲೇ 40% ಕಮಿಷನ್ ತನಿಖೆಗೆ ಸರ್ಕಾರ ತೀರ್ಮಾನ ಮಾಡಿದೆ. ನಿವೃತ್ತ ನ್ಯಾ.ನಾಗಮೋಹನ್ ದಾಸ್ (Nagmohan Das)ನೇತೃತ್ವದಲ್ಲಿ ಸಮಿತಿ ರಚನೆ ಮಾಡುವ ಸಾಧ್ಯತೆ ಇದೆ. ಸಂಪುಟ ಸಭೆಯಲ್ಲೀ 40% ತನಿಖೆಗೆ ಸಚಿವರ ಸಹಮತ ಸಹ ಲಭ್ಯವಾಗಿದೆ.
ಇದನ್ನೂ ವೀಕ್ಷಿಸಿ: ವಂದೇ ಭಾರತ್ ರೈಲಿಗೆ ಯುವಕರಿಂದ ಕಲ್ಲು ತೂರಾಟ... ರೈಲ್ವೇ ಇಲಾಖೆಗೆ ಪ್ರಾಣ ಸಂಕಟ