Jul 17, 2023, 9:38 AM IST
ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯನ್ನು(Shakti scheme) ಜಾರಿಗೊಳಿಸಿದಾಗಿನಿಂದ ಸರ್ಕಾರಿ ಬಸ್‌ಗಳಲ್ಲಿ(Bus) ಮಹಿಳೆಯರ ಪ್ರಯಾಣ ಹೆಚ್ಚಾಗಿದೆ. ಮಹಿಳೆಯರು ಟಿಕೆಟ್(ticket) ತೆಗೆದುಕೊಂಡ ಸ್ಟಾಪ್‌ಗಿಂತಲೂ ಮುಂದೆ ಪ್ರಯಾಣವನ್ನು ಮಾಡುತ್ತಿದ್ದಾರೆ. ಕಂಡೆಕ್ಟರ್ (conductor) ಬಳಿ ಟಿಕೆಟ್ ತೆಗೆದುಕೊಳ್ಳುವುದೇ ಒಂದು ಸ್ಟಾಪ್‌ಗೆ, ಆದ್ರೆ ಅವರು ಇಳಿಯುವುದೇ ಬೇರೆಕಡೆಯಾಗಿದೆ. ಮಹಿಳೆಯರ ಈ ತಪ್ಪಿನಿಂದ ಕಂಡೆಕ್ಟರ್‌ಗಳಿಗೆ ಯಾಕೆ ಶಿಕ್ಷೆ ಎಂದು ನೌಕರರ ಸಂಘ ಪ್ರಶ್ನಿಸಿದೆ. ಉಚಿತ ಪ್ರಯಾಣ(Free Travel) ಹಿನ್ನೆಲೆ ಮಹಿಳೆಯರು ಟಿಕೆಟ್ ಪಡೆದ ನಂತರ ಬೇರೆ ಬಸ್‌ಗೆ ಹೋಗುತ್ತಿದ್ದಾರೆ, ಅಲ್ಲದೇ ಬೇರೆ ಸ್ಟಾಪ್‌ನಲ್ಲಿ ಇಳಿಯುವುದು ಹೆಚ್ಚಾಗಿದೆ. ಇದರಿಂದ ಕಂಡೆಕ್ಟರ್‌ಗಳಿಗೆ ದಂಡವನ್ನು ಹಾಕಲಾಗುತ್ತಿದೆ. ಇದಕ್ಕೆ ಸಾರಿಗೆ ನೌಕರರ ಸಂಘ ವಿರೋಧವನ್ನು ವ್ಯಕ್ತಪಡಿಸಿದೆ.
ಇದನ್ನೂ ವೀಕ್ಷಿಸಿ: ಇನ್‌ಸ್ಟಾಗ್ರಾಮ್‌ನಲ್ಲಿರುವ ಮಹಿಳೆಯರೇ ನಿಶಾ ಟಾರ್ಗೆಟ್: ಫೋಟೋಶೂಟ್ ಹೆಸರಲ್ಲಿ ಪಂಗನಾಮ