ಪ್ರತಿಭಟನೆ ಮಧ್ಯೆಯೂ ಹರಿಯುತ್ತಿರುವ ಕಾವೇರಿ: ಸುಪ್ರೀಂ ಅಂಗಳದಲ್ಲಿ ‘ಕಾವೇರಿ’ ಭವಿಷ್ಯ !

ಪ್ರತಿಭಟನೆ ಮಧ್ಯೆಯೂ ಹರಿಯುತ್ತಿರುವ ಕಾವೇರಿ: ಸುಪ್ರೀಂ ಅಂಗಳದಲ್ಲಿ ‘ಕಾವೇರಿ’ ಭವಿಷ್ಯ !

Published : Sep 01, 2023, 11:46 AM IST

ರಾಜ್ಯದಲ್ಲಿ ಕಾವೇರಿ ಕಿಚ್ಚು ಜೋರಾಗಿದೆ. ನೀರು ಇಲ್ಲದಿದ್ರೂ ಕೆಆರ್‌ಎಸ್‌ನಿಂದ ಪ್ರತಿನಿತ್ಯ ತಮಿಳುನಾಡಿಗೆ ಸರ್ಕಾರ ನೀಡು ಬಿಡುತ್ತಿದೆ. ಸರ್ಕಾರದ ನಿರ್ಧಾರಕ್ಕೆ ಅನ್ನದಾತರು ಸಿಟ್ಟು ಹೊರಹಾಕಿದ್ದಾರೆ. ಇತ್ತ ಸುಪ್ರೀಂ ಅಂಗಳದಲ್ಲಿ ಕಾವೇರಿ ಭವಿಷ್ಯ ನಿರ್ಧಾರವಾಗಲಿದೆ.

ಒಂದು ಕಡೆ ರೈತರ ಆಕ್ರೋಶದ ಕಿಚ್ಚು, ಮತ್ತೊಂದಡೆ ಕಾವೇರಿ ನದಿಗೆ ಇಳಿದು ಅರೆಬೆತ್ತಲೆ ಪ್ರೊಟೆಸ್ಟ್, ಅನ್ಯಾಯ ಅನ್ಯಾಯ ಎಂಬ ಘೋಷಣೆ ಮಧ್ಯೆ ಕಾವೇರಿ ನಮ್ಮದು ಎಂದು ರೈತರ ಪ್ರಮಾಣ. ಇದು ಕಾವೇರಿ ಕೊಳ್ಳದಲ್ಲಿ ಭುಗಿಲೆದ್ದ ಕಾವೇರಿ(Cauvery) ಕಿಚ್ಚು. ಕೆಆರ್‌ಎಸ್‌ನಲ್ಲಿ ನೀರಿಲ್ಲ. ಸಂಕಷ್ಟದ ನಡುವೆಯೂ ಕಾವೇರಿ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ(Tamilnadu) ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ. ಸರ್ಕಾರದ ಈ ನಡೆಯಿಂದ ಸಿಟ್ಟಿಗೆದ್ದ ರೈತರು ಪ್ರತಿಭಟನೆಗೆ ಇಳಿದಿದ್ದಾರೆ. ಶ್ರೀರಂಗಪಟ್ಟಣದ ಬಳಿ ನೀರಿಗೆ ಇಳಿದು ರೈತರು ಕಾವೇರಿ ನಮ್ಮವಳು ಎಂದು ಘೋಷಣೆ ಕೂಗಿದ್ರು. K.R.S ಎದುರು ಶಾಸಕ ದರ್ಶನ್ ಪುಟ್ಟಣಯ್ಯ (Darshan Puttanaiah) ನೇತೃತ್ವದಲ್ಲೂ ಅಹೋರಾತ್ರಿ ಧರಣಿ ನಡೆಯುತ್ತಿದೆ. ಇನ್ನು ಮಂಡ್ಯ(Mandya) ನಗರದಲ್ಲೂ ರೈತರು ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ, ಬಳಿಕ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ್ರು. ರೈತ ಪರ, ಕನ್ನಡ ಪರ ಸಂಘಟನೆಗಳು ಒಟ್ಟಾಗಿ ಕಾವೇರಿ ಕಹಳೆ ಮೊಳಗಿಸಿದ್ರು. ಕರುನಾಡಲ್ಲಿ ಕಾವೇರಿ ಕಿಚ್ಚು ಹೆಚ್ಚಾಗುತ್ತಿದ್ರೆ. ಇತ್ತ ಕಾವೇರಿ ಪ್ರಾಧಿಕಾರದ ಆದೇಶದಂತೆ ಪ್ರತಿನಿತ್ಯ ತಮಿಳುನಾಡಿಗೆ K.R.S ನಿಂದ 5 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ. ಈ ಮಧ್ಯೆ ಸುಪ್ರೀಂಕೋರ್ಟ್‌ನಲ್ಲಿ ಜಲ ವಿವಾದದ ಅರ್ಜಿ ವಿಚಾರಣೆಗೆ ಬರಲಿದೆ.

ಇದನ್ನೂ ವೀಕ್ಷಿಸಿ:  16 ವರ್ಷ ಸಾರ್ಥಕ ಸೇವೆ: ಶಿಕ್ಷಕನ ವರ್ಗಾವಣೆಗೆ ವಿದ್ಯಾರ್ಥಿಗಳ ಕಣ್ಣೀರ ಬೀಳ್ಕೊಡುಗೆ

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
Read more