Sep 12, 2023, 11:56 AM IST
ಸಂಕಷ್ಟದಲ್ಲಿರುವ ಕರ್ನಾಟಕಕ್ಕೆ ಇದೀಗ ಮತ್ತೆ ಟೆನ್ಷನ್ ಶುರುವಾಗಿದೆ. ಇಂದು ಮಧ್ಯಾಹ್ನ 2:30ಕ್ಕೆ ಹೈವೋಲ್ಟೇಜ್ ಸಭೆ ಇದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಯಲಿದೆ. ಸಮಿತಿ ಅಧ್ಯಕ್ಷ ವಿನಿತ್ ಗುಪ್ತ ನೇತೃತ್ವದಲ್ಲಿ ಮೀಟಿಂಗ್ ನಡೆಯಲಿದ್ದು, ಇದರಲ್ಲಿ ಅಧಿಕಾರಿಗಳು, ಇಂಜಿನಿಯರ್‌ಗಳು ಭಾಗವಹಿಸಲಿದ್ದಾರೆ. ನೀರು ಬೇಕೆ ಬೇಕೆಂದು ತಮಿಳುನಾಡು (Tamilnadu) ಸರ್ಕಾರದ ಪಟ್ಟು ಹಿಡಿದಿದ್ದು, ನೀರು ಬಿಡಲು ಸಾಧ್ಯವೇ ಇಲ್ಲ ಎಂದು ಕರ್ನಾಟಕ (Karnataka) ಹೇಳುತ್ತಿದೆ. ಇಂದಿನ ಸಭೆಯಲ್ಲಿ ಕರ್ನಾಟಕ ಮತ್ತೊಮ್ಮೆ ಮನವಿ ಮಾಡುವ ಸಾಧ್ಯತೆ ಇದೆ. ಕಾವೇರಿ (Cauvery) ಕೊಳ್ಳದ ವಾಸ್ತವ ಚಿತ್ರಣ ಬಿಚ್ಚಿಡಲು ಕಾಂಗ್ರೆಸ್ ಸರ್ಕಾರ ತಯಾರಿ ನಡೆದಿದೆ. KRSನಲ್ಲಿ ನೀರಿಲ್ಲ ಬಿಡಲು ಆಗಲ್ಲ ಎಂದು ಮನವಿ ಮಾಡಲು ಮುಂದಾಗಿದೆ.
ಇದನ್ನೂ ವೀಕ್ಷಿಸಿ: ದಾವಣಗೆರೆಯಲ್ಲಿ ಲೋಕಸಮರಕ್ಕೆ ತಯಾರಿ ಶುರು: ಶಾಮನೂರು ಕುಟುಂಬದಿಂದಲೇ ಕಣಕ್ಕಿಳೀತರಾ ಅಭ್ಯರ್ಥಿ..?