ದಳ ಕಮಲ ಸ್ನೇಹಕ್ಕೆ ನೀರೆರೆದ ಕಾವೇರಿ: ಸರ್ಕಾರಕ್ಕೆ ಜಂಟಿಯಾಗಿ ಹೋದ ಸಂದೇಶವೇನು..?

Sep 28, 2023, 2:41 PM IST

ಇಬ್ಬರೂ ಕೂಡ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರು. ಇಬ್ಬರೂ ಒಂದು ಕಾಲದಲ್ಲಿ ಮೈತ್ರಿ ಮಾಡಿಕೊಂಡು ಕರ್ನಾಟದಲ್ಲಿ ಆಳ್ವಿಕೆ ಮಾಡಿದವರು. ಆದ್ರೆ ಬದಲಾದ ರಾಜಕೀಯ ಸನ್ನಿವೇಶಗಳು ಒಬ್ಬರಲ್ಲಿ ಮಹಾನ್ ಅಂತರವನ್ನೇ ಸೃಷ್ಟಿಸಿತ್ತು. ಆದ್ರೆ ಈಗ 17 ವರ್ಷಗಳ ನಂತರ ಆ ಇಬ್ಬರು ಸ್ನೇಹ ಹಸ್ತ ಚಾಚಿ ಮುಂಬರುವ ಚುನಾವಣೆ ಮೇಲೆ ಕಣ್ಣೀಟ್ಟಿದ್ದಾರೆ. ಕರ್ನಾಟಕದಲ್ಲಿ(Karnataka) ಈಗ ಅತಿ ದೊಡ್ಡದಾಗಿ ಸದ್ದು ಮಾಡ್ತಾ ಇರೋದು ಅಂದರೆ ಅದು ಕಾವೇರಿ (Cauvery) ನದಿ. ನಮ್ಮ ಜೀವ ನದಿಯ ನೀರನ್ನ ಬೇಕಾಬಿಟ್ಟಿಯಾಗಿ ತಮಿಳುನಾಡಿಗೆ(Tamilnadu) ಬಿಡ್ತಾ ಇರೋದಕ್ಕೆ ರೈತರು, ಕನ್ನಡಿಗರು ತಾಳ್ಮೆ ಮೀರಿದ್ದಾರೆ. ಸರ್ಕಾರದ ವಿರುದ್ಧ ಪ್ರತಿಭಟನೆಗೆ ಬೀದಿಗಿಳಿದಿದ್ದಾರೆ. ಇನ್ನೊಂದು ಕಡೆಯಲ್ಲಿ ಕಾವೇರಿ ವಿಚಾರ ರಾಜಕೀಯವಾಗಿಯೂ ವಿಪಕ್ಷಗಳ ಕೈಗೆ ಸಿಕ್ಕ ದೊಡ್ಡ ಅಸ್ತ್ರವೇ ಆಗಿದೆ. ವಿಪಕ್ಷ ನಾಯಕರು ಕೂಡ ಬೀದಿಗಿಳಿದು ಸರ್ಕಾರದ ವಿರುದ್ಧ ತೊಡೆ ತಟ್ಟಿದ್ದಾರೆ. ಬಿಜೆಪಿಯ (BJP) ಕೇಸರಿ ನಾಯಕರು ಕಾಂಗ್ರೆಸ್(Congress) ಸರ್ಕಾರದ ವಿರುದ್ಧ ಜೋರಾದ ಧ್ವನಿಯಲ್ಲಿ ಪ್ರತಿಭಟನೆ ಮಾಡ್ತಿದ್ದಾರೆ. ಇದೀಗ ಕೇಸರಿ ನಾಯಕರಿಗೆ ಸಾಥ್ ನೀಡ್ತಾ ಇರೋರು ಮತ್ಯಾರು ಅಲ್ಲ, ದಳ ಪತಿಗಳು. ಅದು 2008.. ಕರ್ನಾಟಕದಲ್ಲಿ ಅತಂತ್ರ ಫಲಿತಾಂಶ ಎದುರಾಗಿತ್ತು. ಆಗ ಸರ್ಕಾರ ಮಾಡೋಕೆ ಕೆಲವೇ ಕೆಲವು ಸೀಟುಗಳ ಶಾರ್ಟೇಜ್ ಕಂಡಿದ್ದ ಭಾರತೀಯ ಜನತಾ ಪಕ್ಷ , ಜನತಾದಳದೊಂದಿಗೆ ಮೈತ್ರಿ ಸಂಕಲ್ಪ ಮಾಡಿಕೊಳ್ತು. ಎರಡೂ ಪಕ್ಷಗಳು ಸೇರಿಕೊಂಡು ಅಧಿಕಾರ ಸ್ವೀಕಾರ ಮಾಡಿದ್ರೆ ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಕೂತುಕೊಳ್ತು.20:20 ಸೂತ್ರಕ್ಕೆ ಒಪ್ಪಿದ್ದ ಉಭಯ ಪಕ್ಷಗಳ ನಡುವೆ ಮೂಡಿದ ರಾಜಕೀಯ ಭಿನ್ನಾಭಿಪ್ರಾಯ ಎರಡು ಮಹಾನ್ ನಾಯಕರ ಮಧ್ಯವೂ ಬಿರುಕು ತಂದಿತು. ಹೆಚ್ ಡಿ ಕುಮಾರಸ್ವಾಮಿ ಹಾಗೂ ಬಿ ಎಸ್ ಯಡಿಯೂರಪ್ಪನವರ ಮಧ್ಯ ಮನಸ್ತಾಪ ಉಂಟಾಯ್ತು. ಈಗ ಮತ್ತೆ ಬಾಡಿ ಹೋದ ದೋಸ್ತಿ ಚಿಗುರೋ ಸಮಯ ಬಂದಿದೆ.. ನಿಸ್ತೇಜ ಸ್ನೇಹಕ್ಕೆ ನೀರೆರೆದಿದೆ ಕಾವೇರಿ ವಿಚಾರ.

ಇದನ್ನೂ ವೀಕ್ಷಿಸಿ:  ಹೇಗಿದೆ ಗೊತ್ತಾ ಭಾರತ-ಕೆನಡಾ ಸಂಬಂಧ ? ಖಲಿಸ್ತಾನಿಗಳ ಟಾರ್ಗೆಟ್ ಹಿಂದಿರೋ ಅಸಲಿ ಕತೆ ಏನು ?