ಬಿಗ್ 3 ಬಿಗ್ ಇಂಪ್ಯಾಕ್ಟ್: ವರದಿ ಬೆನ್ನಲ್ಲೇ ಬಿಸಿಯೂಟಕ್ಕಾಗಿ ಬಂತು ನೋಡಿ 11 ಕೋಟಿ ರೂ.!

Jan 5, 2023, 5:47 PM IST

ವರದಿ- ಜಗನ್ನಾಥ ಪೂಜಾರ್ ಏಷ್ಯಾನೆಟ್ ಸುವರ್ಣನ್ಯೂಸ್ 

ರಾಯಚೂರು (ಜ.05): ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಬೇಕು ಅಂತ ಮಧ್ಯಾಹ್ನದ ಬಿಸಿಯೂಟ ಆರಂಭಿಸಲಾಗಿದೆ. ಅಷ್ಟೇ ಅಲ್ಲದೆ ಮಕ್ಕಳಲ್ಲಿನ ಅಪೌಷ್ಟಿಕತೆ ದೂರು ಮಾಡಲು ಮಕ್ಕಳಿಗೆ ಹಾಲು ಮತ್ತು ಮೊಟ್ಟೆ ವಿತರಣೆ ಮಾಡಲಾಗುತ್ತಿತ್ತು. ಆದರೆ ಕಳೆದ ನಾಲ್ಕು ತಿಂಗಳಿಂದ ಬಿಸಿಯೂಟಕ್ಕೆ ಬೇಕಾದ ಎಲ್ಲಾ ಸಾಮಾಗ್ರಿಯೂ ಮುಖ್ಯ ಶಿಕ್ಷಕರು ತಮ್ಮ ಸ್ವಂತ ಹಣದಲ್ಲಿ ಖರೀದಿ ಮಾಡುವಂತೆ ಆಗಿತ್ತು. ಈ ಬಗ್ಗೆ ಬಿಗ್3ಯಲ್ಲಿ ವರದಿ ಮಾಡಿದ್ಮೇಲೇ ಅದೆಂಥ ಮಹಾ ಇಪ್ಯಾಂಕ್ಟ್ ಆಗಿದೆ ಗೊತ್ತಾ..? ನೋಡಿ ಇಲ್ಲಿದೆ ಸ್ಪೆಷಲ್ ರಿಪೋರ್ಟ್

ಸರ್ಕಾರಿ ಶಾಲೆಯಲ್ಲಿ ನಿತ್ಯವೂ ಮಕ್ಕಳಿಗೆ ಬೆಳಗ್ಗೆ ಹಾಲು ಮತ್ತು ಮಧ್ಯಾಹ್ನ ಬಿಸಿಯೂಟದ ಜೊತೆಗೆ ಮೊಟ್ಟೆ ಮತ್ತು ಬಾಳೆಹಣ್ಣು ನೀಡಲು ಸರ್ಕಾರ ಪ್ಲಾನ್ ಮಾಡಿದೆ. ಅದರಂತೆ ಶಾಲೆಯಲ್ಲಿ ನಿತ್ಯವೂ ಬಿಸಿಯೂಟ ನೀಡಲಾಗುತ್ತಿದೆ. ರಾಯಚೂರು ಜಿಲ್ಲೆಯಲ್ಲಿ 1ರಿಂದ 10ನೇ ತರಗತಿಯಲ್ಲಿ 2,89,287 ಮಕ್ಕಳ ದಾಖಲಾಗಿದ್ದು, ಈ ಮಕ್ಕಳ ಬಿಸಿಯೂಟಕ್ಕಾಗಿ ಸರ್ಕಾರ ಈ ವರ್ಷ 106 ಕೋಟಿ ರೂಪಾಯಿ ಅನುದಾನ ನಿಗದಿ ಮಾಡಿದೆ. ಆದರೆ ಸರ್ಕಾರ ಹಣ ನಿಗದಿ ಮಾಡಿದರೂ ರಾಯಚೂರು ಜಿಲ್ಲಾ ಪಂಚಾಯತ್ ಖಾತೆಗೆ ಮಾತ್ರ ಹಣ ಜಮಾವಾಗಿಲ್ಲ. 

ರಾಯಚೂರಿನಲ್ಲಿ ಸಂಬಳದ ಹಣ ಖರ್ಚು ಮಾಡಿ 'ಬಿಸಿಯೂಟ' ನಡೆಸುವ ಶಿಕ್ಷಕರು

ಬಿಸಿಯೂಟಕ್ಕೆ ಶಿಕ್ಷಕರ ಪರದಾಟ: ಹೀಗಾಗಿ ಕಳೆದ ನಾಲ್ಕು ತಿಂಗಳಿಂದ ಸಾದಿಲ್ವಾರು ಅನುದಾನ ಶಾಲೆಗಳಿಗೆ ಹಂಚಿಕೆ ಮಾಡಲು ಆಗಿಲ್ಲ.ಇದರಿಂದಾಗಿ ಮಕ್ಕಳಿಗೆ ನಿತ್ಯ ಬಿಸಿಯೂಟಕ್ಕೆ ಬೇಕಾದ ಬೆಳೆ, ತರಕಾರಿ, ಎಣ್ಣೆ , ಉಪ್ಪು ಮತ್ತು ಸಾಂಬಾರು ಪದಾರ್ಥಗಳು ತರಲು ನಿತ್ಯವೂ ಮುಖ್ಯ ಶಿಕ್ಷಕರು ಪರದಾಟ ನಡೆಸಿದ್ದಾರೆ ಎಂದು ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ 2022ರ ನವೆಂಬರ್19ರಂದು ಬಿಗ್3ಯಲ್ಲಿ ಗರಂ ಆಗಿಯೇ ವರದಿ ಪ್ರಸಾರ ಮಾಡಲಗಿತ್ತು. ವರದಿ ನೋಡಿದ ರಾಯಚೂರು ಜಿಲ್ಲಾ ಪಂಚಾಯತ್ ಸಿಇಒ ಶಶಿಧರ್ ಕುರೇರ್ ಖುದ್ದು ಬಿಗ್3 ಕಾರ್ಯಕ್ರಮದಲ್ಲಿ ವೈವ್‌ಗೆ ಬಂದು ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು.

ಬಿಗ್3 ವರದಿಗೆ ರಿಲೀಸ್ ಆಯ್ತು 11ಕೋಟಿ 69ಲಕ್ಷ : ಇನ್ನು, ರಾಯಚೂರು ಜಿಲ್ಲಾ ಪಂಚಾಯತ್ ಸಿಇಒ ಶಶಿಧರ್ ಕುರೇಶ್ ಹೇಳಿದಂತೆ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದ್ರು. ಇದೀಗ ರಾಯಚೂರು ಜಿಲ್ಲೆಗೆ ಬಿಸಿಯೂಟಕ್ಕೆ ಬೇಕಾದ ಸಾದಿಲ್ವಾರು ವೆಚ್ಚ ಮತ್ತು ಅಡುಗೆಯವರ ವೇತನಕ್ಕೆ ಬೇಕಾದ ಒಟ್ಟು ರಾಯಚೂರು ಜಿಲ್ಲೆಗೆ ಬಂತು 11ಕೋಟಿ 69ಲಕ್ಷ ರೂಪಾಯಿ ಬಂದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ಆಯ್ತು. ಕಳೆದ 6 ತಿಂಗಳಿಂದ ವೇತನವಿಲ್ಲದೆ ಬಿಸಿಯೂಟ ತಯಾರಿಕೆ ಮಾಡಿದ ಅಡುಗೆಯವರು ಯಾವಾಗ ನಮಗೆ ಸಂಬಳ ಬರುತ್ತೆ ಅಂತ ಕಾಯುತ್ತಾ ಇದ್ದರು. ಇದೀಗ ಇವರೆಲ್ಲ  ಫುಲ್ ಖುಷ್ ಆಗಿ ಸರ್ಕಾರಕ್ಕೆ ಮತ್ತು ಬಿಗ್3ಗೆ ಧನ್ಯವಾದವನ್ನು ತಿಳಿಸಿದ್ದಾರೆ. 

PM-POSHAN Scheme: ಶಾಲಾ ಮಕ್ಕಳಿಗೆ ವಿಶೇಷ ಭೋಜನ ಯೋಜನೆ

ನಿತ್ಯ ಹಾಲು, ಬಾಳೆಹಣ್ಣು ಮತ್ತು ಮೊಟ್ಟೆ ಸಿಗ್ತಿದೆ..! ಇತ್ತ ರಾಯಚೂರು ಜಿಲ್ಲೆಯ 2,89,287 ಮಕ್ಕಳಿಗೂ ನಿತ್ಯವೂ ಹಾಲು, ಬಾಳೆಹಣ್ಣು ಮತ್ತು ಮೊಟ್ಟೆ ಬಿಸಿಯೂಟವನ್ನ ಕ್ರಮಬದ್ಧವಾಗಿ ನೀಡಲಾಗುತ್ತಿದೆ. ಇದು ವಿದ್ಯಾರ್ಥಿಗಳು, ಶಿಕ್ಷಕರು, ಹಾಗು ಅಧಿಕಾರಿಗಳಿಗೂ ಸಂತಸ ತಂದಿದೆ. ಹೀಗಾಗಿ ಏಷ್ಯಾನೆಟ್ ಸುವರ್ಣನ್ಯೂಸ್ ಬಿಗ್3  ಧನ್ಯವಾದಗಳನ್ನ ತಿಳಿಸಿದ್ದಾರೆ. ಒಟ್ಟಿನಲ್ಲಿ ಬಿಗ್3 ವರದಿ ಅಂದ್ರೆ ಕೇವಲ ಸಮಸ್ಯೆ ತೋರಿಸಿ ಬಿಡುವುದು ಅಲ್ಲ..ಸಮಸ್ಯೆಯ ಪರಿಹಾರವಾಗುವರೆಗೂ ನಿರಂತರವಾಗಿ ಅಧಿಕಾರಿಗಳ ಬೆನ್ನುಬಿದ್ದು ಪರಿಹಾರ ಸಿಗುವರೆಗೂ ವರದಿ ಮಾಡುವ ಏಕೈಕ ಚಾನಲ್ ಅಂದ್ರೆ ಅದು ನಿಮ್ಮ ಏಷ್ಯಾನೆಟ್ ಸುವರ್ಣನ್ಯೂಸ್ ಮಾತ್ರ. 

ಕ್ಯಾಮಾರಾಮನ್ ಶ್ರೀನಿವಾಸ್ ಜೊತೆಗೆ ಜಗನ್ನಾಥ ಪೂಜಾರ್ ಏಷ್ಯಾನೆಟ್ ಸುವರ್ಣನ್ಯೂಸ್ ರಾಯಚೂರು.