ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ರು ರಾಜ್ಯದ ಕ್ರೀಡಾಪಟುಗಳಿಗೆ ಸಿಗ್ತಿಲ್ವಾ ಬೆಂಬಲ ?

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ರು ರಾಜ್ಯದ ಕ್ರೀಡಾಪಟುಗಳಿಗೆ ಸಿಗ್ತಿಲ್ವಾ ಬೆಂಬಲ ?

Published : Oct 06, 2023, 11:09 AM IST

ಕ್ರೀಡೆಗೆ ರಾಜ್ಯದಲ್ಲಿ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ವ..? ಕ್ರೀಡಾಪಟುಗಳನ್ನು ಗುರುತಿಸುವ ಕೆಲಸ ನಡೆಯುತ್ತಿಲ್ವಾ..?, ನೇಮಕಾತಿ ಅಧಿಸೂಚನೆ ಬರೀ ಪತ್ರಕಷ್ಟೇ ಸೀಮಿತಾನಾ?..ಹೀಗೊಂದು ಅನುಮಾನ ರಾಜ್ಯಾದ್ಯಂತ ಮೂಡಿದೆ. 
 

ಕರುನಾಡು ಸಾಕಷ್ಟು ಕ್ರೀಡಾಪಟುಗಳ ತವರೂರು. ರಾಜ್ಯದ ಹಲವು ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿ ಪದಕ ತಂದುಕೊಟ್ಟು ಕೀರ್ತಿ ಮೆರೆದಿದ್ದಾರೆ. ಇಂತಹದರ ನಡುವೆಯೇ ಪದಕ ಗೆದ್ದ ಕ್ರೀಡಾಪಟುಗಳನ್ನು(Sportspersons) ರಾಜ್ಯದಲ್ಲಿ ಸರಿಯಾಗಿ ನಡೆಸಿಕೊಳ್ಳುತ್ತಿಲ್ವ ಎಂಬ ಅನುಮಾನ ಮೂಡಿದೆ. ಸರ್ಕಾರಿ ಉದ್ಯೋಗಗಳಲ್ಲಿ ಕ್ರೀಡಾ ಕೋಟಾದಡಿಯಲ್ಲಿ ಹಲವರು ಉದ್ಯೋಗ(Job) ಪಡೆದಿದ್ದಾರೆ. ಆದರೆ ಕಳೆದ ಒಂದಿಷ್ಟು ವರ್ಷಗಳಿಂದ ಪದಕ ಗೆದ್ದ ಕ್ರೀಡಾ ಪಟುಗಳಿಗೆ ಉದ್ಯೋಗ ಕೊಡುವಲ್ಲಿ ಸರ್ಕಾರ ನಿರಾಸಕ್ತಿ ತೋರುತ್ತಿದೆ ಎಂಬ ಅನುಮಾನ ಕಾಡುತ್ತಿದೆ. ಅದರಲ್ಲೂ ಪ್ಯಾರಾ ಒಲಂಪಿಕ್ಗಳಲ್ಲಿ ಭಾಗವಹಿಸಿ ಪದಕ ಗೆದ್ದ ಅನೇಕ ವಿಶೇಷಚೇತನ ಕ್ರೀಡಾಪಟುಗಳಿದ್ದಾರೆ. ಇವರಲ್ಲಿ ಕೆಲವರಿಗೆ ಕ್ರೀಡಾ ಕೋಟಾದಡಿ ಉದ್ಯೋಗ ದೊರೆತರೂ ಮುಂಬಡ್ತಿ ಸಿಗುತ್ತಿಲ್ಲ ಅನ್ನೋ ಆರೋಪ ಇದೆ. ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ಕ್ರೀಡಾಕೋಟದಡಿ ನಮ್ಮ ರಾಜ್ಯದಲ್ಲಿ ಉದ್ಯೋಗ ಕೊಡುವ ವಿಚಾರದಲ್ಲಿ ತುಂಬಾ ವಿಳಂಬವಾಗುತ್ತಿದೆ. ಹೀಗಾದ್ರೆ ಕೆಲವು ಕ್ರೀಡಾಪಟುಗಳ ವಯಸ್ಸಿನ ಮಿತಿ ಮೀರುವುದರಿಂದ ಮುಂದೆ ಉದ್ಯೋಗ ಪಡೆಯುವುದು ಕಷ್ಟವಾಗಲಿದೆ ಎನ್ನುತ್ತಿದ್ದಾರೆ ಪದ್ಮಶ್ರೀ ವಿಜೇತ ಪ್ಯಾರ ಒಲಂಪಿಕ್ ಕ್ರಿಡಾಪಟು ಕೆ.ವೈ ವೆಂಕಟೇಶ್. ಕರ್ನಾಟಕದಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ ಸಿವಿಲ್ ಸೇವೆಗಳಲ್ಲಿ ನೇರ ನೇಮಕಾತಿ ಕುರಿತಂತೆ ಸಚಿವಾಲಯದಿಂದ ಕಳೆದ ಮಾರ್ಚ್ನಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಆದ್ರೆ ಇದುವರೆಗೂ ಅನುಷ್ಠಾನಕ್ಕೆ ಬಂದಿಲ್ಲ. ಹೊಸ ಸರ್ಕಾರ ಆಸ್ತಿತ್ವಕ್ಕೆ ಬಂದ ಬಳಿಕ ಬರೀ ಗ್ಯಾರಂಟಿ ಕಡೆಗೇ ನೋಡದೆ ನಮ್ಮತ್ತವೂ ಸ್ವಲ್ಪ ನೋಡಿ ಅನ್ನುತ್ತಿದ್ದಾರೆ ಕ್ರೀಡಾ ಸಾಧಕರು.

ಇದನ್ನೂ ವೀಕ್ಷಿಸಿ:  ಸಾಂಸ್ಕೃತಿಕ ನಗರಿಯಲ್ಲಿ ಮಹಿಷ ದಸರಾ ಸಂಘರ್ಷ: ಕರಾವಳಿಗೂ ಹಬ್ಬಿದ ಮಹಿಷ ದಸರಾ ನಂಟು..!

06:06ಕಬ್ಬಡಿ ಟೀಮ್‌ನಲ್ಲಿ ಕೋಚ್‌ ಆಗಿ ಸೋನಿಯಾ ಮನ್ನಾ ಎದುರಿಸಿದ ಸವಾಲುಗಳೇನು
05:28IPL 2025: ಕೋಲ್ಕತಾದಲ್ಲೇ ಕೆಕೆಆರ್‌ಗೆ ಸೋಲುಣಿಸುತ್ತಾ ಆರ್‌ಸಿಬಿ?
18:46‘ಲೆಕ್ಕ’ ತಪ್ಪಿದ್ದೆಲ್ಲಿ ಭಾರತದ ಹೆಣ್ಣು ಹುಲಿ? ವಿನೇಶ್ ವಿರುದ್ಧ ನಡೆಯಿತಾ ಸಂಚು? ಏನದು ತೆರೆಯ ಹಿಂದಿನ ಸತ್ಯ?
11:33ಮುವಾಯ್ ಥಾಯ್​ ಫೈಟ್‌ನಲ್ಲಿ ಅರುಣ್ ಸಾಗರ್ ಪುತ್ರನ ಅಸಾಮಾನ್ಯ ಸಾಧನೆ..! ಥಾಯ್ಲೆಂಡ್‌ನಲ್ಲಿ ಧೂಳೆಬ್ಬಿಸ್ತಿರೋ ಭಾರತದ ಯಂಗ್​ ಫೈಟರ್​
19:35ನಿಜವಾಯ್ತು ‘ಅರ್ಚಕ’ವಾಣಿ, ಒಲಿದಳು ಮಾರಿಯಮ್ಮ ದೇವಿ! ಕರ್ನಾಟಕದ ಅಳಿಯ ಈಗ ಭಾರತ ಟಿ20 ತಂಡದ ನಾಯಕ!
44:42ವಾಣಿಜ್ಯನಗರಿಯಲ್ಲಿ ಕ್ರಿಕೆಟ್‌ ಪ್ರೇಮಿಗಳ ಸಂಭ್ರಮ: ಮುಂಬೈ ಬೀದಿಗಳಲ್ಲಿ ಅಭಿಮಾನಿಗಳ ಹರ್ಷೋದ್ಘಾರ
49:08ಮುಂಬೈನಲ್ಲಿ 'ವಿಶ್ವ' ವಿಜೇತರಿಗೆ ಅದ್ಧೂರಿ ಸನ್ಮಾನ: ವಿಶ್ವಕಪ್‌ ವೀರರ 2.8 ಕಿ.ಮೀ ರೋಡ್‌ ಶೋ
20:04ಎರಡು ಅಚ್ಚರಿಯ ವಿದಾಯ..ಕಾದಿದ್ಯಾ ಮತ್ತೊಂದು ಸರ್‌ಪ್ರೈಜ್? ಸೋಲಿನೊಂದಿಗೆ ಅಂತ್ಯವಾಯ್ತಾ ಮಹೇಂದ್ರನ ಕ್ರಿಕೆಟ್ ಬದುಕು?
05:46 Druva Sarja: ಜಿಂಗಲ ಜಿಂಗಲ ಜಿಂಗಲ ಜೈ RCB ಎಂದ ಧ್ರುವ..! ಯೋಗರಾಜ್ ಭಟ್ ಬರೆದ ಹಾಡಿಗೆ ಆ್ಯಕ್ಷನ್‌ ಪ್ರಿನ್ಸ್‌ ವಾಯ್ಸ್..!
18:45Sania Mirza: ಟೆನ್ನಿಸ್ ತಾರೆಯ ಬದುಕಿನಲ್ಲಿ ಆಗಿರೋದೇನು..? ಸಾನಿಯಾ ಮಿರ್ಜಾ ಜೀವನದ ರಹಸ್ಯವೇನು..?