Nov 10, 2021, 4:30 PM IST
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಭೋಜನ ಪ್ರಿಯರು. ಸಮಾಧಿ ಬಳಿ ಅಪ್ಪುಗೆ ಇಷ್ಟವಾದ ತಿಂಡಿ-ತಿನಿಸುಗಳನ್ನು ಎಡೆ ಇಟ್ಟಿದ್ದರು. ಫೈವ್ ಸ್ಟಾರ್ ಹೊಟೇಲ್‍ನಿಂದ ಫುಟ್‍ಪಾತ್ ಹೊಟೇಲ್ ಖಾದ್ಯಗಳನ್ನೂ ಸವಿದಿರೋದಾಗಿ ಅಪ್ಪು ಬಹಳಷ್ಟು ಸಲ ಹೇಳಿಕೊಂಡಿದ್ದಾರೆ. ಹೀಗಾಗಿ ಬೆಂಗಳೂರು ಸೇರಿದಂತೆ ಚಿತ್ರೀಕರಣಕ್ಕೆ ಹೋದ ವೇಳೆ ಮರೆಯದೆ ಆಯಾ ಜಿಲ್ಲೆಯ ವಿಶಿಷ್ಟ ಆಹಾರಗಳ ಸವಿ ನೋಡಿದ್ದಾರೆ.
ಅಪ್ಪುಗೆ ನಾನ್ ವೆಜ್ ಪ್ರಿಯ. ಅಪ್ಪೂ ಸಹಾಯದಿಂದಲ್ಲೇ ಹೋಟೆಲ್ ಪ್ರಾರಂಭಿಸಿದ ಚಂದ್ರು ಅವರ ಕೈರುಚಿ ಎಂದರೆ ಅಪ್ಪುಗೆ ತುಂಬಾ ಇಷ್ಟ. ಪುನೀತ್ ಯಾವುದೇ ಊರಿಗೆ ಹೋಗಲಿ, ಆ ಊರಿನ ಫೇವರೇಟ್ ಹೋಟೆಲ್‍ನಲ್ಲಿ ಊಟ – ತಿಂಡಿ ಸವಿಯದೇ ಬರುತ್ತಿರಲ್ಲ. ಅದರಲ್ಲೂ ಮೈಸೂರಿಗೆ ಬಂದಾಗಲೆಲ್ಲ ಹನುಮಂತು ಪಲಾವ್, ಮೈಲಾರಿ ಹೋಟೆಲ್‍ಗೆ ಹೋಗಿ ಮಟನ್ ಪಲಾವ್, ದೋಸೆಯ ರುಚಿ ಸವಿಯದೇ ಹೋಗ್ತಿರಲಿಲ್ಲವಂತೆ.
ಅಪ್ಪು ಇಷ್ಟೊಂದು ಅಭಿಮಾನಿಗಳನ್ನು ಗಳಿಸಿದ್ದ ಅಂತ ನಮಗೇ ಗೊತ್ತಿರಲಿಲ್ಲ: ಶಿವಣ್ಣ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಬಾಬುರಾಯನಕೊಪ್ಪಲಿನಲ್ಲಿ ಇರುವ ಜೈ ಭುವನೇಶ್ವರಿ ಹೊಟೇಲ್‍ನ ಮಾಂಸಾಹಾರ ಎಂದರೆ ಪುನೀತ್ ಅವರಿಗೆ ಅಚ್ಚುಮೆಚ್ಚು. ಕಾಲ್ ಸೂಪ್, ಬೋಟಿ ಗೊಜ್ಜು, ಮಟನ್ ಕುರ್ಮಾ, ಮುದ್ದೆ ಇಷ್ಟ. ಅಪ್ಪುಗೆ ತಂದೆ ರಾಜ್‍ಕುಮಾರ್ ಈ ಹೋಟೆಲ್‍ಅನ್ನು ಪರಿಚಯಿಸಿದ್ರಂತೆ. ಮಂಗಳೂರಿಗೆ ಅಪ್ಪು ಬಂದಾಗಲೆಲ್ಲಾ ಹಳ್ಳಿ ಮನೆ ರೊಟ್ಟೀಸ್‍ನಲ್ಲಿ ತಮಗಿಷ್ಟವಾದ ಊಟ ಮಾಡ್ತಿದ್ರು.