Ashwini Buys Audi Q7 Car:  ಆಡಿ ಕ್ಯೂ 7 ಕಾರು ಖರೀದಿಸಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್! ಬೆಲೆ ಎಷ್ಟು ಕೋಟಿ ಗೊತ್ತಾ..?

Ashwini Buys Audi Q7 Car: ಆಡಿ ಕ್ಯೂ 7 ಕಾರು ಖರೀದಿಸಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್! ಬೆಲೆ ಎಷ್ಟು ಕೋಟಿ ಗೊತ್ತಾ..?

Published : Apr 01, 2024, 10:29 AM IST

ಲ್ಯಾಂಬೋರ್ಗಿನಿ, ಆಡಿ ಕ್ಯೂ7 ಸೇರಿದಂತೆ ಕೆಲ ಕಾರುಗಳು ಅಪ್ಪು ನೆಚ್ಚಿನ ಕಾರಾಗಿತ್ತು. ಇದೀಗ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅಪ್ಪು ನೆಚ್ಚಿನ ಕಾರಾಗಿರುವ ಆಡಿ ಕ್ಯೂ7 ಕಾರನ್ನು ಖರೀದಿಸಿದ್ದಾರೆ.

ಯುವರಾಜ್‌ಕುಮಾರ್ ಅಭಿನಯದ ಯುವ ಸಿನಿಮಾ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಇದೇ ಖುಷಿಯಲ್ಲಿರೋ ದೊಡ್ಮನೆ ಫ್ಯಾನ್ಸ್‌ಗೆ ಮತ್ತೊಂದು ಖುಷಿಯ ಸುದ್ದಿ. ಅದೇನಂದ್ರೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಆಡಿಕ್ಯೂ 7 ಕಾರನ್ನು(Audi Q7 car)ಖರೀದಿಸಿದ್ಧಾರೆ. ಕಾರಿನೊಟ್ಟಿಗೆ ಅಶ್ವಿನಿ ಅವರು ನಿಂತಿರುವ ಚಿತ್ರವನ್ನು ಆಡಿ ಬೆಂಗಳೂರು ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ. ಗ್ರೇ ಬಣ್ಣದ ಆಡಿ ಕ್ಯೂ 7 ಕಾರನ್ನು ಅಶ್ವಿನಿ ಪುನೀತ್‌ರಾಜ್‌ಕುಮಾರ್(Ashwini Puneeth Rajkumar) ಖರೀದಿ ಮಾಡಿದ್ದು ಈ ಕಾರಿನ ಬೆಲೆ ಬೆಂಗಳೂರಿನಲ್ಲಿ(Bengaluru) 1.10 ಕೋಟಿಯಿಂದ 1.20 ಕೋಟಿ ರೂಪಾಯಿಗಳಿವೆ. ಅಶ್ವಿನಿ ಅವರು ಆಡಿ ಕ್ಯೂ7 ಟಾಪ್ ಎಂಡ್ ಮಾಡೆಲ್ ಅನ್ನೇ ಖರೀದಿಸಿದ್ದಾರೆ ಎನ್ನಲಾಗಿದೆ. ಅಶ್ವಿನಿ ಪುನೀತ್ ರಾಜ್ಕುಮಾರ್ ಖರೀದಿ ಮಾಡಿರುವ ಆಡಿ ಕ್ಯೂ 7 ಕಾರು ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಈ ಕಾರು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದ್ದು, ಭದ್ರತೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ಹಲವು ಏರ್ ಬ್ಯಾಗ್‌ಗಳು, ಕ್ಯಾಮೆರಾ, ಅಡಾಸ್ ತಂತ್ರಜ್ಞಾನ, ರೋಡ್ ಗ್ರಿಪ್ನ ಹಲವು ತಂತ್ರಜ್ಞಾನಗಳನ್ನು ಒಳಗೊಂಡಿದೆ. ಜೊತೆಗೆ ಐಶಾರಾಮಿತ್ವಕ್ಕೂ ಮಹತ್ವ ನೀಡಲಾಗಿದೆ. ಪೈಲೆಟ್ ಸೀಟ್ಗಳು. ಮಸಾಜರ್ ಇನ್ನಿತರೆ ಸವಲತ್ತುಗಳು ಇರುವ ಸೀಟ್ಗಳು, ಅತ್ಯದ್ಭುತ ಎನ್ಫೊಟೇನ್ಮೆಂಟ್ ಸಿಸ್ಟಮ್, ಆಧುನಿಕ ತಂತ್ರಜ್ಞಾನದ ಶಾಕ್ ಅಬ್ಸಾರ್ಬರ್ಗಳು, ಕಡಿಮೆ ಸೆಕೆಂಡ್ಗಳಲ್ಲಿ 100 ಕಿ.ಮೀ ವೇಗ ದಾಟಬಲ್ಲ ಕ್ಷಮತೆಯನ್ನು ಈ ಕಾರು ಹೊಂದಿದೆ.

ಇದನ್ನೂ ವೀಕ್ಷಿಸಿ:  Uttarakanda Movie : ಉತ್ತರಕಾಂಡದಲ್ಲಿಲ್ಲ ರಮ್ಯಾ! ನಟಿ ಬದಲಿಗೆ ಯಾರಾಗ್ತಾರೆ ಗಬ್ರು ಸತ್ಯನ ಲವ್ವರ್..?

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more