ನಿರೀಕ್ಷೆ ಹೆಚ್ಚಿಸಿದೆ ಲವ್ ಮಾಕ್ಟೈಲ್-2, ಆದಿ ಲೈಫಲ್ಲಿ ಎಂಟ್ರಿ ಕೊಡೋ ಹುಡುಗಿ ಯಾರು?

Feb 3, 2022, 3:04 PM IST

ಮಿಲನಾ ನಾಗರಾಜ್ ತಮ್ಮ ಪತಿ ಡಾರ್ಲಿಂಗ್ ಕೃಷ್ಣ ಅವರೊಂದಿಗೆ ಲವ್ ಮಾಕ್ಟೇಲ್-2 ಟ್ರೇಲರ್ ಯಾವಾಗ ರಿಲೀಸ್ ಮಾಡುತ್ತೀರಾ ಅಂತ ಜಗಳವಾಡಿದ್ದರು. ಇದೀಗ ಜಗಳಕ್ಕೆ ಉತ್ತರವಾಗಿ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ್ದಾರೆ. ಮೊದಲ ಭಾಗದಲ್ಲಿ ಕಳೆದು ಕೊಂಡ ಪ್ರೀತಿಯ ಬಗ್ಗೆ ಸಿನಿ ವೀಕ್ಷಕರಿಗೂ ಎಲ್ಲಿಲ್ಲದ ಸಿಂಪಥಿ ಇದೆ. ಆದರೆ, ಇದೀಗ ಎರಡನೇ ಭಾಗದಲ್ಲಿ ಹೀರೋ ಆದಿಗೆ ಸಿಗೋದು ಯಾರು? ಕ್ಯಾನ್ಸರ್‌ಗೆ ನಿಧಿಮಾ ಬಲಿಯಾದ ಎರಡು ವರ್ಷಗಳ ನಂತರ ಆದಿ ಯಾರ ಪ್ರೀತಿಯಲ್ಲಿ ಬೀಳುತ್ತಾರೆ? ಕಥೆ ಹೇಗೆ ಮುಂದುವರಿಯುತ್ತದೆ? ಆದರೆ, ಮತ್ತೆ ಮದುವೆಯಾಗುವ ಸುಳಿವು ಮಾತ್ರ ಈ ಟ್ರೈಲರ್‌ನಲ್ಲಿ ಸಿಕ್ಕಿದ್ದು. ಅಷ್ಟಕ್ಕೂ ಹೇಗಿದೆ ಟ್ರೈಲರ್?