Mugilpete Song Release: ಪ್ರೇಯಸಿಯ ಮೌನದಲ್ಲೇ ಗಾಯಾಳಾದ ಮೆಗಾ ಕ್ರೇಜಿಸ್ಟಾರ್

Nov 14, 2021, 12:54 PM IST

ಕ್ರೇಜಿಸ್ಟಾರ್ ವಿ.ರವಿಚಂದ್ರನ್ (V.Ravichandran) ಅವರ ಪುತ್ರ ಮನುರಂಜನ್ ರವಿಚಂದ್ರನ್ (Manuranjan Ravichandran) ಅಭಿನಯದ 'ಮುಗಿಲ್​ಪೇಟೆ' (Mugilpete) ಚಿತ್ರವು ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರದ ಪ್ರಚಾರ (Promotion) ಕಾರ್ಯವು ಭರ್ಜರಿಯಾಗಿ ನಡೆಯುತ್ತಿದೆ. ಈ ನಡುವೆ ಚಿತ್ರತಂಡ ಚಿತ್ರದ ಒಂದೊಂದೆ ಹಾಡನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಚಿತ್ರದ ಮತ್ತೊಂದು ಹಾಡು  ಬಿಡುಗಡೆಯಾಗಿದೆ. 'ದೂರ ಹೋಗೋ ಮುನ್ನ' (Doora Hogo Munna) ಎಂಬ ಲಿರಿಕಲ್ ಹಾಡು ಲಹರಿ ಮ್ಯೂಸಿಕ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.

'ಮುಗಿಲ್‌ಪೇಟೆ' ಹುಡುಗಿ ಜೀನ್ಸ್ ಅಲ್ಲಿ ಮಾಸ್ ಆಗಾವ್ಲೆ ಸಾಂಗ್ ರಿಲೀಸ್!

ಈ ಹಾಡಿನ ಪ್ರಾರಂಭದಲ್ಲಿ ಚಿತ್ರತಂಡ, ಇತ್ತೀಚೆಗೆ ನಿಧನರಾದ ಪುನೀತ್ ರಾಜ್‌ಕುಮಾರ್ ರನ್ನ ನೆನೆದಿದ್ದಾರೆ. 'ದೂರ ಹೋಗೋ ಮುನ್ನ ದೂರಲಾರೆ ನಿನ್ನ ಮೌನದಲ್ಲೇ ಇನ್ನು ಗಾಯಾಳು ನಾ' ಹಾಡಿಗೆ ಸಂಗೀತ ಪ್ರಿಯರು ಬೊಂಬಾಟ್ ರೆಸ್ಪಾನ್ಸ್ ವ್ಯಕ್ತಪಡಿಸಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯವಿರುವ ಈ ಹಾಡಿಗೆ ಶ್ರೀಧರ್.ವಿ.ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ. ವಾಸುಕಿ ವೈಭವ್ ಕಂಠಸಿರಿಯಲ್ಲಿ ಹಾಡು ಮೂಡಿ ಬಂದಿದೆ. 'ಮುಗಿಲ್‌ಪೇಟೆ' ಸಿನಿಮಾ ಇದೇ ತಿಂಗಳು 19ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment