Dec 3, 2021, 5:45 PM IST
ಬಹುತೇಕ ಉತ್ತರ ಕರ್ನಾಟಕದವರೇ ಸೇರಿ ನಿರ್ಮಿಸಿರುವ 'ಲಕ್ಷ್ಯ' (Lakshya) ಚಿತ್ರ ಬಿಡುಗಡೆಯಾಗಿ ಸಖತ್ ಸದ್ದು ಮಾಡುತ್ತಿದ್ದು, ರವಿ ಸಾಸನೂರ್ (Ravi Sasanuru) ಅವರು ಕಥೆ ಬರೆದು ಚಿತ್ರ ನಿರ್ದೇಶನ ಮಾಡಿದ್ದಾರೆ. ಕಾಲೇಜು ಯುವಕ ಯುವತಿಯರನ್ನು ಸೆಳೆಯುತ್ತಿರುವ ಸಾಮಾಜಿಕ ವಿಷಯವನ್ನು ಎತ್ತಿತೋರಿಸುವ ಉತ್ತಮ ಸಂದೇಶ ಸಾರುವ ಈ ಚಿತ್ರ ದಿನೇ ದಿನೇ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಾಮಾಜಿಕ ಜೀವನಲ್ಲಿ ದುಡ್ಡಿನ ದರ್ಪದಿಂದ ಮೆರೆಯುವ ದುರಂಹಕಾರಿಗಳು, ಮಕ್ಕಳ ನಿರ್ಲಕ್ಷ್ಯ, ಬಡವರ ನ್ಯಾಯ-ಅನ್ಯಾಯದ ಸೂಕ್ಷ್ಮ ವಿಚಾರಗಳನ್ನು ಈ ಚಿತ್ರದಲ್ಲಿ ಹೇಳಲಾಗಿದೆ.
83 Film: ಡಿಸೆಂಬರ್ 24ಕ್ಕೆ ಕಪಿಲ್ ದೇವ್ ಬಯೋಪಿಕ್ ರಿಲೀಸ್?
ಈಗಾಗಲೇ ಹಿರಿಯ ನಾಗರೀಕರಿಂದ ಮಹಿಳೆಯರಿಂದ ಪ್ರಶಂಸೆಗೆ ಪಾತ್ರವಾಗಿರುವ ಈ ಚಿತ್ರದ ಈಗ ಯುವಕ ಯುವತಿಯರಿಗೂ ಇಷ್ಟವಾಗುತ್ತಿದೆ. 'ಮೂಡಲ ಮನೆ' ಖ್ಯಾತಿಯ ಸಂತೋಷ್ ರಾಜ್ ಜಾವರೆ (Santhosh Raj Javare) ಈ ಚಿತ್ರದ ನಾಯಕ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿರುವ ನಿತಿನಾದ್ವಿ (Nitinaadvi) ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಬೆಳಗಾವಿ, ಸಾಂಗ್ಲಿ, ಗೋಕಾಕ್ ಸುತ್ತಮುತ್ತ 'ಲಕ್ಷ್ಯ' ಚಿತ್ರದ ಚಿತ್ರೀಕರಣ ನಡೆದಿದೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment