Puneeth Rajkumar: ಅಪ್ಪನ ನೋವಲ್ಲೇ ಎಜುಕೇಷನ್‌ಗಾಗಿ ಅಮೆರಿಕಕ್ಕೆ ಹೊರಟ ಪುತ್ರಿ ಧೃತಿ

Nov 15, 2021, 1:42 PM IST

ಇತ್ತೀಚೆಗಷ್ಟೇ ನಿಧನರಾದ ನಟ, ತಂದೆ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ (Puneeth Rajkumar) ಅವರ​ ಕಾರ್ಯಗಳನ್ನು ಮುಗಿಸಿ ಅವರ ಅವರ ಪುತ್ರಿ ಧೃತಿ (Drithi) ಮತ್ತೆ ಅಮೆರಿಕದತ್ತ ಪ್ರಯಾಣ ಬೆಳೆಸಿದ್ದಾರೆ. ನ್ಯೂಯಾರ್ಕ್​ನಲ್ಲಿ ವಿದ್ಯಾಭ್ಯಾಸಕ್ಕೆ ತೆರಳುತ್ತಿರುವ ಧೃತಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Kempegowda International Airport) ದೆಹಲಿಗೆ ಹಾಗೂ ದೆಹಲಿಯಿಂದ ನ್ಯೂಯಾರ್ಕ್​ಗೆ ತೆರಳಿದ್ದಾರೆ. ಅಪ್ಪು ಪುತ್ರಿ ಧೃತಿ ಬೀಳ್ಕೊಡಲು ತಾಯಿ ಅಶ್ವಿನಿ, ತಂಗಿ ವಂದಿತಾ, ರಾಘವೇಂದ್ರ ರಾಜ್ ಕುಮಾರ್ (Raghavendra Rajkumar) ಸೇರಿ ರಾಜ್​ ಕುಟುಂಬಸ್ಥರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಬಿಳ್ಕೊಟ್ಟರು.

ನಾನ್ ವೆಜ್ ಅಂದ್ರೆ ತುಂಬಾ ಇಷ್ಟ..! ಪವರ್‌ಸ್ಟಾರ್ ಫುಡಿಯೂ ಹೌದು

ಇನ್ನು ನಟ ಪುನೀತ್ ರಾಜ್‌ ಕುಮಾರ್‌ಗೆ ಹೃದಯಾಘಾತ ( Heart attack) ಸಂಭವಿಸಿ, ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ (Vikram Hospital) ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಬಾಲನಟನಾಗಿ ಅಪ್ಪು ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ಅಲ್ಲದೆ, ರಾಜ್‌ಕುಮಾರ್ ಕುಟುಂಬದಿಂದ ಬಂದಿರುವ ಪ್ರತಿಭಾವಂತ ನಟನಾಗಿದ್ದ ಪುನೀತ್, ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment