ಸ್ಯಾಂಡಲ್‌ವುಡ್‌ನಲ್ಲಿ 'ಗರಡಿ' ಘರ್ಜನೆ: ಕುಸ್ತಿ ಪೈಲ್ವಾನ್ ಆದ ಯಶಸ್ ಸೂರ್ಯ!

ಸ್ಯಾಂಡಲ್‌ವುಡ್‌ನಲ್ಲಿ 'ಗರಡಿ' ಘರ್ಜನೆ: ಕುಸ್ತಿ ಪೈಲ್ವಾನ್ ಆದ ಯಶಸ್ ಸೂರ್ಯ!

Published : Sep 28, 2023, 10:11 AM IST

ಸ್ಯಾಂಡಲ್‌ವುಡ್‌ ಶೈನಿಂಗ್ ಅಂತ ಹೇಳೋದು ಇದಕ್ಕೆ ನೋಡಿ. ಕನ್ನಡದಲ್ಲಿ ಮತ್ತೊಂದು ಖಡಕ್ ಸಿನಿಮಾ ಬರ್ತಿದೆ. ಮುಂಗಾರು ಮಳೆಯಂಥಾ ಮುದ್ದಾದ ಪ್ರೇಮ ಕಾವ್ಯವನ್ನು ತೆರೆ ಮೇಲೆ ತಂದ ಭಟ್ಟರೆ ಇದೀಗ ಕುಸ್ತಿ ಅಖಾಡಕ್ಕಿಳಿದು ಗರಡಿ ಆಡಿಸ್ತಿದ್ದಾರೆ. ಗರಡಿ ಗರ್ಜನೆಗೆ  ನಾಯಕ ಯಶಸ್ ಸೂರ್ಯ ಇದೇ ಮೊದಲ ಬಾರಿಗೆ ಇಂಥಾ ಖಡಕ್ ರೋಲ್ ಮಾಡಿದ್ದು ಇನ್ಮುಂದೆ ಗರಡಿ ಸೂರ್ಯ ಎಂದೇ ಕರೆಸಿಕೊಳ್ಳೋದು ಗ್ಯಾರೆಂಟಿ. ಗರಡಿ ಪಾಳಯದಲ್ಲಿ ಕುಸ್ತಿ ಕೋಚ್ ಆಗಿ ಕೌರವ ಬಿ.ಸಿ. ಪಾಟೀಲ್ ಮೀಸೆ ತಿರುವುತ್ತಿದ್ದಾರೆ.
 

ಸಿನಿಮಾ ಮೇಕಿಂಗ್ ದೃಶ್ಯಗಳು ಈಗಾಗಲೇ ಜನರ ಆಕರ್ಷಣೆಗೆ ಕಾರಣವಾಗಿವೆ. ಸಾಂಪ್ರದಾಯಿಕ ಕುಸ್ತಿಯ ಕೇಂದ್ರಿಕೃತ ಕಥೆಯುಳ್ಳ ಗರಡಿ ಸಿನಿಮಾ  ನವೆಂಬರ್ 10 ರಂದು ಬಿಡುಗಡೆಯಾಗಲಿದೆ. ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಈ ಸುದ್ದಿ ಅಧಿಕೃತವಾಗಿ ಬಹಿರಂಗವಾಗಿದೆ. ಯಶಸ್ ಸೂರ್ಯಗೆ(Yashas Surya) ನಾಯಕಿಯಾಗಿದ್ದಾರೆ ಸೋನಲ್ ಮೊಂಟೆರೊ(Sonal Montero). ಆದ್ರೆ ಈ ಸಿನಿಮಾದಲ್ಲೊಂದು ಮಸ್ತ್ ಸಾಂಗ್ ಇದ್ದು ಎಲ್ರೂ ಈಗಾಗಲೇ ಈ ಹಾಡಿಗೆ ಕುಣಿತ ಹಾಕ್ತಿದ್ದಾರೆ. ಗ್ರಾಮೀಣ ಬದುಕಿನ ಬ್ಯಾಕ್ರಾಡ್ರಾಪಲ್ಲಿ ಯೋಗರಾಜ್ ಭಟ್ಟರ ಗರಡಿ ಕತೆ ನಡೆಯಲಿದ್ದು, ಸಿನಿಮಾದಲ್ಲಿ ಹಲವು ಕುತೂಹಲ ಘಟ್ಟಗಳಿವೆ. ವನಜಾ ಪಾಟೀಲ್ ಅವರ ಕೌರವ ಪ್ರೊಡಕ್ಷನ್ ಹೌಸ್ (Kaurava Production House)ಮತ್ತು ಸೌಮ್ಯಾ ಫಿಲಂಸ್ ನಿರ್ಮಿಸಿರುವ ಗರಡಿ ಚಿತ್ರದಲ್ಲಿ ರವಿಶಂಕರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರಂಜನ್ ಬಾಬು ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದರೆ, ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಭಟ್ಟರ ಗರಡಿ ಸಿನಿಮಾ ನೋಡಿದ್ಮೇಲೆ ಪ್ರೇಕ್ಷಕ ಹೇಳ್ಬೋದು ಹೊಡಿರೆಲೆ ಹಲಗಿ  ಹಾಕಲೆ ಎಡರು ಸ್ಟೆಪ್ಪು ಅಂತ. ನಾಯಕ ನಟ ಯಶಸ್ ಸೂರ್ಯಗೆ ಇದು ಬಿಗ್ ಚಾಲೆಂಜಿಂಗ್ ರೋಲ್ ಆಗಿದ್ದು ಗರಡಿ ಗರ್ಜನೆ ನವೆಂಬರ್ನಲ್ಲಿ ಥಿಯೇಟರ್ನಲ್ಲಿ ಮೊಳಗಲಿದೆ.

ಇದನ್ನೂ ವೀಕ್ಷಿಸಿ:  ಫ್ರೆಶ್ ಲವ್ ಸ್ಟೋರಿ ಸಿನಿಮಾ 'ಬಾನದಾರಿಯಲಿ': 4ನೇ ಭಾರಿ ಜತೆಯಾದ ಗಣೇಶ್-ಪ್ರೀತಂ..!

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more