James Poster: ಜೇಮ್ಸ್ ಲುಕ್‌ನಲ್ಲಿ ಪುನೀತ್‌ನನ್ನು ನೋಡಿ ಫ್ಯಾನ್ಸ್ ಖುಷ್

Jan 26, 2022, 5:48 PM IST

ಗಣರಾಜ್ಯೋತ್ಸವದಂದು ಸೈನಿಕನಾಗಿ ಮಿಂಚಿದ ಅಪ್ಪು ಪೋಟೋಗಳು ವೈರಲ್ ಆಗಿವೆ. ಪವರ್‌ಸ್ಟಾರ್ ಅಭಿನಯದ ಜೇಮ್ಸ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಸಲಾಂ ಸೋಲ್ಜರ್, ದೇಶಕ್ಕೆ ನೀನೇ ಪವರ್ ಎಂದು ರಾಘವೇಂದ್ರ ರಾಜ್ ಕುಮಾರ್ ಟ್ವೀಟ್ ಮಾಡಿದ್ದಾರೆ. ಅಪ್ಪು ಅಭಿಮಾನಿಗಳು ಪೋಸ್ಟರ್ ನೋಡಿ ಸಂಭ್ರಮ ಪಟ್ಟಿದ್ದಾರೆ.

ಆರ್ಮಿ ಆಫೀಸರ್ ಲುಕ್‌ನಲ್ಲಿ ಮಿಂಚಿದ ಪುನೀತ್​ ರಾಜ್​ಕುಮಾರ್

ಅಪ್ಪು ಸಮಾಧಿ ಬಳಿಯೂ ಜನರು ಸೇರಿದ್ದಾರೆ. ಸೈನಿಕನಾಗಿ ಕಾಣಿಸಿಕೊಂಡಿರೋ ಅಪ್ಪು ಲುಕ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದು ಇದು ಚೇತನ್ ಕುಮಾರ್ ನಿರ್ದೇಶನದ ಸಿನಿಮಾ. ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಪೋಸ್ಟರ್ ನೋಡಿ, ಪೂಜೆ ಮಾಡಿ ಅಭಿಮಾನ ತೋರಿಸಿದ್ದಾರೆ.