Vaibhavi Shandilya: ಮಾರ್ಟಿನ್ ಚಿತ್ರಕ್ಕೆ ನಾಯಕಿಯಾದ ಬಹುಭಾಷಾ ಶಾಕುಂತಲೆ

Dec 12, 2021, 2:36 PM IST

ಸ್ಯಾಂಡಲ್‌ವುಡ್‌ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) 'ಮಾರ್ಟಿನ್' (Martin) ಚಿತ್ರದಲ್ಲಿ ನಟಿಸುತ್ತಿದ್ದು, ನಿರ್ದೇಶಕ ಎ.ಪಿ ಅರ್ಜುನ್ (A.P.Arjun) ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ನಾಯಕಿಯಾಗಿ ನಟಿ ವೈಭವಿ ಶಾಂಡಿಲ್ಯ (Vaibhavi Shandilya) ಆಯ್ಕೆಯಾಗಿದ್ದಾರೆ. ಮರಾಠಿ, ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಸರು ಮಾಡಿರುವ ವೈಭವಿ ಶಾಂಡಿಲ್ಯ, ಶರಣ್ (Sharan) ಅಭಿನಯದ 'ರಾಜ್ ವಿಷ್ಣು' (Raj Vishnu) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದರು. 

Dhruva Sarja: ಮಾರ್ಟಿನ್‌ ಚಿತ್ರದ ಪಾತ್ರಕ್ಕೆ ಕಸರತ್ತು ನಡೆಸುತ್ತಿರುವ ಆಕ್ಷನ್ ಪ್ರಿನ್ಸ್

ಯೋಗರಾಜ್ ಭಟ್ (Yogaraj Bhat) ನಿರ್ದೇಶದ 'ಗಾಳಿಪಟ 2' (Galipata 2) ಚಿತ್ರದಲ್ಲೂ ವೈಭವಿ ಪವನ್‌ಗೆ (Pawan) ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಧ್ರುವ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ದ್ವಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಔಟ್ ಅಂಡ್ ಔಟ್ ಕಮರ್ಶಿಯಲ್ ಆಕ್ಷನ್ ಥ್ರಿಲ್ಲರ್ 'ಮಾರ್ಟಿನ್' ಸಿನಿಮಾ ಕಾಲೇಜ್ ಬ್ಯಾಕ್‌ ಡ್ರಾಪ್‌ನಲ್ಲಿ ನಡೆಯುವ ಕಥೆಯಾಗಿದ್ದು, ಈ ಚಿತ್ರದ ಪಾತ್ರಕ್ಕಾಗಿ ಅವರು ಜಿಮ್‌ನಲ್ಲಿ ಫುಲ್​ ವರ್ಕೌಟ್ ಮಾಡುತ್ತಿದ್ದಾರೆ. ಉದಯ್ ಕೆ.ಮೆಹ್ತಾ (Uday K.Mehta) ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment