ಅಪ್ಪು ನೋಡ್ಕೊಳ್ತಿದ್ದ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ನನಗೆ ಕೊಡಿ, ಕೈಮುಗಿದು ಕೇಳಿದ ವಿಶಾಲ್

Nov 17, 2021, 1:07 PM IST

ಪುನೀತ್ ರಾಜ್‌ಕುಮಾರ್(Puneeth Rajkumar) ನುಡಿನಮನ(Nudinamana) ಕಾರ್ಯಕ್ರಮದಲ್ಲಿ ಪರಭಾಷಾ ಸಿನಿಮಾ ಗಣ್ಯರು, ರಾಜಕೀಯ ಮುಖಂಡರೂ ಭಾಗಿಯಾಗಿದ್ದಾರೆ. ಅಪ್ಪು ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah), ಬಿಎಸ್. ಯಡಿಯೂರಪ್ಪ, ನಟ ವಿಶಾಲ್ ಅವರು ಮನದುಂಬಿದ ನುಡಿನಮನಗಳನ್ನು ಸಲ್ಲಿಸಿದ್ದಾರೆ. ಇಲ್ಲಿ ನೋಡಿ ವಿಡಿಯೋ

Puneeth Rajkumar: ಅಪ್ಪುವಿಗೆ ನುಡಿನಮನ ಕಾರ್ಯಕ್ರಮ, ಭಾವುಕರಾಗಿ ನಮನ ಸಲ್ಲಿಸಿದ ಗಣ್ಯರು

ಈ ಹಿಂದೆಯೇ ನಟ ಪುನೀತ್ ನಿಧನರಾದಾಗ ಈ ಬಗ್ಗೆ ಪ್ರತಿಕ್ರಿಯಿಸಿದ ವಿಶಾಲ್ ನಟನ ಸಾವಿಗೆ ಸಂತಾಪ ವ್ಯಕ್ತಪಡಿಸಿ ಅವರು ನಡೆಸುತ್ತಿದ್ದ ಶಾಲೆಗಳ ಜವಾಬ್ದಾರಿ ತೆಗೆದುಕೊಂಡಿದ್ದರು. ಇದೀಗ ನುಡಿನಮನ ಕಾರ್ಯಕ್ರಮದಲ್ಲಿ ಅದನ್ನು ಮತ್ತೆ ಹೇಳಿದ ನಟ ನನಗೆ ಇದೊಂದು ಅವಕಾಶ ಕೊಡಿ ಎಂದು ಕುಟುಂಬಸ್ಥರಲ್ಲಿ ಕೈಮುಗಿದು ಕೇಳಿದ್ದಾರೆ. ಸ್ವಂತ ಮನೆಯೂ ಇಲ್ಲ ಎಂದ ನಟ ಅದನ್ನು ಮುಂದೆಯೂ ಕಟ್ಟಬಹುದು, ಇದನ್ನು ಮಾಡಲು ಅವಕಾಶ ಕೊಡಿ ಎಂದಿದ್ದಾರೆ.