ಮಗನ ಗೃಹ ಪ್ರವೇಶಕ್ಕೆ ಬಂದ ಅಮ್ಮನ ಸಂತೋಷಕ್ಕೆ ಪಾರವೇ ಇಲ್ಲ. ಸೊಸೆ ಆಕೆಯನ್ನು ಬರಮಾಡಿಕೊಂಡ ಪರಿ, ಆಕೆಗೆ ಕಣ್ಣೀರನ್ನು ತರಿಸಿದೆ. ವೈರಲ್ ವಿಡಿಯೋ ಇಲ್ಲಿದೆ..
ಬೆಂಗಳೂರು (ಜೂನ್ 13): ಭಾರತೀಯ (Indian) ಮೂಲದ ಈ ವಿಡಿಯೋ ಮೂಲ ಗೊತ್ತಿಲ್ಲ. ಆದರೆ, ಈ ವಿಡಿಯೋ ನೋಡಿದ ಬಳಿಕ ನಮ್ಮ ಕಣ್ಣಾಲಿಗಳ ತೇವವಾಗುವುದು ಖಂಡಿತ. ದೇಶದ ಪ್ರತಿ ಮನೆಯೂ ಹೀಗೆ ಇರಲಿ ಎಂದು ಅಂದುಕೊಳ್ಳುವುದು ಖಚಿತ.
ವಯಸ್ಸಾದ ತಂದೆ ತಾಯಿಯನ್ನು ವೃದ್ದಾಶ್ರಮದ (Old Age Home) ದಾರಿ ತೋರಿಸುತ್ತಿರುವ ಸಮಯದಲ್ಲಿ, ಮಗನ ಮನೆಯ ಗೃಹಪ್ರವೇಶಕ್ಕೆ ಬಂದ ಅತ್ತೆಯನ್ನು (Mother in Law) ಸೊಸೆ (daughter in law) ಪ್ರೀತಿಯಿಂದ ಸ್ವಾಗತಿಸಿರುವ ವಿಡಿಯೋ ವೈರಲ್ ಆಗಿದೆ. ಹಿರಿಯ ಜೀವಗಳನ್ನು ಪ್ರೀತಿಯಿಂದ ನೋಡಿಕೊಳ್ಳುವ ಜನರೂ ಇದ್ದಾರೆ ಎನ್ನುವುದು ಇದನ್ನು ನೋಡಿದ ಬಳಿಕ ತಿಳಿಯುತ್ತದೆ.
ಮೂರೂವರೆ ಲಕ್ಷ ಪಡೆದು ಬಂದ ಸೊಸೆ, ಅತ್ತೆ ಮಾವನ ಕೂಡಿ ಹಾಕಿ ನಾದಿನಿ ಜೊತೆ ಎಸ್ಕೇಪ್!
ಮನೆಗೆ ಬಂದ ಅತ್ತೆಗೆ ಆರತಿ ಎತ್ತಿ ಸ್ವಾಗತಿಸುವ ಸೊಸೆ, ಇಡೀ ಮನೆಯನ್ನು ಅವರಿಗೋಸ್ಕರ ವಿಶೇಷವಾಗಿ ಸಿಂಗರಿಸಿದ್ದಾರೆ. ಮನೆಯ ಒಳಗೆ ಬಂದು ನಿಧನರಾದ ಪತಿಯ ಚಿತ್ರಕ್ಕೆ ನಮಸ್ಕರಿಸುವ ಹಿರಿಯ ಜೀವ, ತನಗೆ ಸಿಕ್ಕ ಸ್ವಾಗತದ ಕುರಿತು ಅಚ್ಚರಿಯನ್ನೂ ವ್ಯಕ್ತಪಡಿಸಿದ್ದಾರೆ.