Jul 17, 2023, 11:57 AM IST
ಬಳ್ಳಾರಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ (BJP) ಮಣಿಸಲು ಕಾಂಗ್ರೆಸ್ (Congress) ಮತ್ತೆ ರಣತಂತ್ರ ಹೂಡುತ್ತಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ (Loksabha Election) 20ಕ್ಕಿಂತ ಹೆಚ್ಚು ಸೀಟ್ ಗೆಲ್ಲಲೇಬೇಕು ಎಂದು ನಿರ್ಧರಿಸಿರುವ ಕಾಂಗ್ರೆಸ್, ಬಳ್ಳಾರಿಯಲ್ಲಿ(bellary) ಗೆಲ್ಲಲು ಪ್ಲ್ಯಾನ್ ಮಾಡುತ್ತಿದೆ. ಬಿಜೆಪಿಯಿಂದ ಶ್ರೀರಾಮುಲು(Sriramulu) ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗ್ತಿದೆ. ಅವರ ವಿರುದ್ಧ ಸಚಿವ ನಾಗೇಂದ್ರ ನಿಲ್ಲಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಅಲ್ಲದೇ ಲೋಕಸಭೆಗೆ ನಾಲ್ಕರಿಂದ ಆರು ಹಾಲಿ ಸಚಿವರನ್ನೇ ಇಳಿಸಲು ಕಾಂಗ್ರೆಸ್ ಪ್ಲ್ಯಾನ್ ಮಾಡಿಕೊಂಡಿದೆ ಎಂದು ಹೇಳಲಾಗ್ತಿದೆ.
ಇದನ್ನೂ ವೀಕ್ಷಿಸಿ: ಜೆಡಿಎಸ್ ಮುಳುಗಿ ಹೋಗಿದೆ ಎಂಬ ಭ್ರಮೆಯಲ್ಲಿದ್ದಾರೆ: ಮಹಾಘಟಬಂಧನ್ ಸಭೆಗೆ ಹೆಚ್‌ಡಿಕೆ ಟಾಂಗ್