May 8, 2023, 11:31 PM IST
ಬೆಂಗಳೂರು (ಮೇ.8): ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 40 ದಿನಗಳ ಬಹಿರಂಗ ಪ್ರಚಾರ ಸೋಮವಾರ ಅಂತ್ಯವಾಗಿದೆ. ಚುನಾವಣಾ ಆಯೋಗ ಬಹಿರಂಗ ಪ್ರಚಾರಕ್ಕೆ ತೆರೆ ಎಳೆದ ಬೆನ್ನಲ್ಲಿಯೇ ಅಭ್ಯರ್ಥಿಗಳು, ಸಂಜೆಯಿಂದಲೇ ಮನೆ ಮನೆ ಪ್ರಚಾರ ಆರಂಭ ಮಾಡಿದ್ದಾರೆ.
ಬಹಿರಂಗ ಪ್ರಚಾರದ ಕೊನೆಯ ದಿನವೂ ಕೇಸರಿ ಕಲಿಗಳು ರಣಕಹಳೆ ಮೊಳಗಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ವಕ್ಷೇತ್ರ ಶಿಗ್ಗಾಂವಿಯಲ್ಲಿ ಅಬ್ಬರದ ಪ್ರಚಾರ ನಡೆಸಿದರೆ, ಶಿವಮೊಗ್ಗದಲ್ಲಿ ಚೆನ್ನಬಸಪ್ಪ ಪರ ಕೆಎಸ್ ಈಶ್ವರಪ್ಪ ಮತಯಾಚನೆ ಮಾಡಿದರು.
ಸೋನಿಯಾ ಗಾಂಧಿಯ 'ಕರ್ನಾಟಕಕ್ಕೆ ಸಾರ್ವಭೌಮತ್ವ' ಹೇಳಿಕೆ, ಚುನಾವಣಾ ಆಯೋಗದಿಂದ ಖರ್ಗೆಗೆ ನೋಟಿಸ್!
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ತೆರೆಬಿದ್ದಿದೆ. ರೋಡ್ ಶೋಗಳು, ಸಮಾವೇಶಗಳನ್ನು ಮಾಡುವಂತಿಲ್ಲ. ಆದರೆ, ಮನೆ ಮನೆ ಪ್ರಚಾರ ನಡೆಸಬಹುದು. ಚುನಾವಣೆ ದಿನ ಹತ್ತಿರವಾಗುತ್ತಿದ್ದಂತೆ ಕಟ್ಟುನಿಟ್ಟಿನ ನಿಯಮ ಜಾರಿಯಾಗಿದೆ.