ಬರುವ ಡಿಸೆಂಬರ್ 1ರಿಂದ ಟೆಲಿಕಾಂ, ಬ್ಯಾಂಕಿಂಗ್ ಸೇರಿದಂತೆ ಕೆಲವೊಂದು ಕ್ಷೇತ್ರಗಳಲ್ಲಿ ಬದಲಾವಣೆ ಆಗಲಿದ್ದು, ಅವುಗಳ ಡಿಟೇಲ್ಸ್ ಇಲ್ಲಿ ನೀಡಲಾಗಿದೆ.
ಬರುವ ಡಿಸೆಂಬರ್ 1ರಿಂದ ಟೆಲಿಕಾಂ, ಬ್ಯಾಂಕಿಂಗ್ ಸೇರಿದಂತೆ ಕೆಲವೊಂದು ಕ್ಷೇತ್ರಗಳಲ್ಲಿ ಬದಲಾವಣೆ ಆಗಲಿದ್ದು, ಅವುಗಳ ಡಿಟೇಲ್ಸ್ ಇಲ್ಲಿ ನೀಡಲಾಗಿದೆ.
OTP ಪಡೆಯುವಲ್ಲಿ ವಿಳಂಬ ಸಾಧ್ಯತೆ:
ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಇದಾಗಲೇ ಕೆಲವೊಂದು ನಕಲಿ ಓಟಿಪಿ ವಿರುದ್ಧ ಪರಿಶೀಲನೆ ಆರಂಭಿಸಿದ್ದು, ಈ ಪರಿಶೀಲನೆಯು ನವೆಂಬರ್ 30ರ ಒಳಗೆ ಮುಗಿಯದೇ ಹೋದಲ್ಲಿ ಗ್ರಾಹಕರು ಓಟಿಪಿ ಪಡೆಯುವಲ್ಲಿ ವಿಳಂಬ ಆಗುವ ಸಾಧ್ಯತೆ ಇದೆ. ಅದೇನೆಂದರೆ, ಸ್ಕ್ಯಾಮರ್‌ಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಇದು ದೊಡ್ಡ ಆರ್ಥಿಕ ನಷ್ಟವನ್ನು ಉಂಟುಮಾಡುತ್ತಿದೆ. ಇದೇ ಕಾರಣದಿಂದ ಸಂಶಯಾಸ್ಪದ OTP ಗಳನ್ನು ನಿಗ್ರಹಿಸುವ ಪ್ರಯತ್ನದಲ್ಲಿ, ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು ಸಂದೇಶ ಪತ್ತೆಹಚ್ಚುವಿಕೆಯನ್ನು ಒದಗಿಸುವಂತೆ ಟೆಲಿಕಾಂ ಕಂಪನಿಗಳಿಗೆ ಇದಾಗಲೇ ಸೂಚಿಸಿದೆ. ಈ ಮೊದಲು ಗಡುವನ್ನು ಅಕ್ಟೋಬರ್ 31 ಕ್ಕೆ ನೀಡಲಾಗಿತ್ತು. ಆದರೆ ಸೇವಾ ನಿರ್ವಾಹಕರ ಬೇಡಿಕೆಗಳ ನಂತರ, TRAI ಅದನ್ನು ನವೆಂಬರ್ 30 ಕ್ಕೆ ವಿಸ್ತರಿಸಿದೆ. ಕಂಪನಿಗಳು ಇದನ್ನು ಅನುಸರಿಸಲು ವಿಫಲವಾದರೆ, ಬಳಕೆದಾರರು OTP ಗಳನ್ನು ಪಡೆಯುವು ವಿಳಂಬವಾಗುವ ಸಾಧ್ಯತೆ ಇದೆ.
ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳಿಗೆ:
ಸರ್ಕಾರಿ ನೌಕರರಿಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಅಡಿಯಲ್ಲಿ ಕೊಡುಗೆಗಳು ಹೆಚ್ಚಾಗಲಿವೆ. ನಿವೃತ್ತಿಯ ನಂತರದ ಪ್ರಯೋಜನಗಳನ್ನು ಪಡೆಯುವ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆಯೂ ಶುರುವಾಗಲಿದೆ. ಅದೇ ರೀತಿ, ಖಾಸಗಿ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಇಪಿಎಫ್‌ಒ ಘೋಷಣೆ ಮಾಡಿದೆ. ಇದರಡಿಯಲ್ಲಿ ನೌಕರರು ಈಗ ತಮ್ಮ ಪಿಂಚಣಿ ಖಾತೆಗಳ ಬಗ್ಗೆ ಹೆಚ್ಚು ಪಾರದರ್ಶಕತೆಯನ್ನು ಪಡೆಯಲು ಸಾಧ್ಯವಾಗಿದೆ. ಇದರ ಹೊರತಾಗಿ ಪ್ರತಿಯೊಬ್ಬ ಉದ್ಯೋಗಿ ಆರೋಗ್ಯ ವಿಮೆಯನ್ನು ತೆಗೆದುಕೊಳ್ಳುವುದು ಕಡ್ಡಾಯವಾಗಿದೆ.
ಗ್ಯಾಸ್ ಸಿಲಿಂಡರ್ ಬೆಲೆ:
ಗ್ಯಾಸ್ ಸಿಲೆಂಡರ್ ಬೆಲೆಯಲ್ಲಿ ಪ್ರತಿ ತಿಂಗಳು ಪರಿಷ್ಕರಣೆ ಆಗುತ್ತಲೇ ಇರುತ್ತದೆ. ಏಕೆಂದರೆ ತೈಲ ಮಾರುಕಟ್ಟೆ ಕಂಪನಿಗಳು (OMC ಗಳು) ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ತಿಂಗಳ 1 ರಂದು ಪರಿಷ್ಕರಿಸುತ್ತವೆ. ಅಕ್ಟೋಬರ್‌ನಲ್ಲಿ, ಗ್ಯಾಸ್ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 48ರೂಪಾಯಿಗೆ ಹೆಚ್ಚಿಸಿವೆ, ಆದರೆ ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳು ಬದಲಾಗದೆ ಉಳಿದಿವೆ. ಆದ್ದರಿಂದ ಡಿಸೆಂಬರ್ 1ಕ್ಕೂ ಇದರಲ್ಲಿ ಸಹಜವಾಗಿ ಬದಲಾವಣೆ ಆಗುವ ಸಾಧ್ಯತೆ ಇದೆ.
ಆಧಾರ್ ಕಾರ್ಡ್:
ಆಧಾರ್ ಕಾರ್ಡ್ ಅಪ್‌ಡೇಟ್‌ಗೆ ಹೊಸ ನಿಯಮಗಳು ಜಾರಿಯಾಗಿದ್ದು, ಡಿಸೆಂಬರ್ 1ರಿಂದ ಅದು ಮತ್ತಷ್ಟು ಸುಲಭವಾಗಲಿದೆ. ಪ್ರತಿ 10 ವರ್ಷಗಳಿಗೊಮ್ಮೆ ಆಧಾರ್ ಕಾರ್ಡ್‌ನ ಪರಿಷ್ಕೃತ ಪರಿಶೀಲನೆ ಕಡ್ಡಾಯ ಎಂದು ಯುಐಡಿಎಐ ನಿರ್ಧರಿಸಿರುವ ಹಿನ್ನೆಲೆಯಲ್ಲಿ, ನಕಲಿ ಕಾರ್ಡ್ ತಡೆಯಲು ಡೇಟಾಬೇಸ್ ನವೀಕರಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
ದ್ವಿಪೌರತ್ವ ಕಾನೂನು ಕುಣಿಕೆಯಲ್ಲಿ ರಾಹುಲ್! ಸಂವಿಧಾನದಲ್ಲಿ ಏನಿದೆ? ಸಾಬೀತಾದ್ರೆ ಏನಾಗತ್ತೆ? ಇಲ್ಲಿದೆ ಡಿಟೇಲ್ಸ್
ಕ್ರೆಡಿಟ್ ಕಾರ್ಡ್ ಬದಲಾವಣೆ:
ವಿಮಾನಗಳು ಮತ್ತು ಹೋಟೆಲ್‌ಗಳಿಗೆ ರಿಡೀಮ್ ಮಾಡಬಹುದಾದ ರಿವಾರ್ಡ್ ಪಾಯಿಂಟ್‌ಗಳ ಸಂಖ್ಯೆಯನ್ನು YES ಬ್ಯಾಂಕ್ ಮಿತಿಗೊಳಿಸಲಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ರೆಗಾಲಿಯಾ ಕ್ರೆಡಿಟ್ ಕಾರ್ಡ್‌ನ ಬಳಕೆದಾರರಿಗೆ ಲೌಂಜ್ ಪ್ರವೇಶ ನಿಯಮಗಳನ್ನು ಸಹ ಬದಲಾಯಿಸುತ್ತಿದೆ. ಹೊಸ ನಿಯಮಗಳ ಪ್ರಕಾರ ಬಳಕೆದಾರರು ಡಿಸೆಂಬರ್ 1 ರಿಂದ ಲಾಂಜ್ ಪ್ರವೇಶಕ್ಕೆ ಅರ್ಹರಾಗಲು ಪ್ರತಿ ತ್ರೈಮಾಸಿಕದಲ್ಲಿ 1 ಲಕ್ಷ ರೂಪಾಯಿವನ್ನು ಖರ್ಚು ಮಾಡಬೇಕಾಗುತ್ತದೆ. ಅದೇ ರೀತಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಆಕ್ಸಿಸ್ ಬ್ಯಾಂಕ್ ತನ್ನ ವಿವಿಧ ಬಳಕೆದಾರರಿಗೆ ರಿವಾರ್ಡ್ ಪಾಯಿಂಟ್ ನಿಯಮಗಳು ಮತ್ತು ಕ್ರೆಡಿಟ್ ಕಾರ್ಡ್ ಶುಲ್ಕವನ್ನು ಸಹ ಪರಿಷ್ಕರಿಸಿವೆ. ಕ್ರೆಡಿಟ್ ಕಾರ್ಡ್ ಮೂಲಕ, 50 ಸಾವಿರಕ್ಕಿಂತ ಹೆಚ್ಚಿನ ಯುಟಿಲಿಟಿ ಬಿಲ್‌ಗಳಿಗೆ (ವಿದ್ಯುತ್, ನೀರು ಮುಂತಾದವು) 1% ಶುಲ್ಕವನ್ನು ಈಗ ವಿಧಿಸಲಾಗುವುದು. ಈ ಬದಲಾವಣೆಯನ್ನು ICICI ಬ್ಯಾಂಕ್ ಮತ್ತು SBI ಕಾರ್ಡ್‌ಗಳಂತಹ ಪ್ರಮುಖ ಬ್ಯಾಂಕ್‌ಗಳು ಜಾರಿಗೆ ತರುತ್ತವೆ.
ಇಷ್ಟೇ ಅಲ್ಲದೇ, ವಿಮಾ ವಲಯದಲ್ಲಿ ಡಿಜಿಟಲ್ ಸೇವೆಗಳಲ್ಲಿ ಬದಲಾವಣೆಗಳಾಗುವ ಸಾಧ್ಯತೆಯಿದೆ. ಇದು ಸಂಪೂಣ್ ಆನ್‌ಲೈನ್ ಆಗಲಿದೆ. ನಗದು ರಹಿತ ವಹಿವಾಟುಗಳನ್ನು ಉತ್ತೇಜಿಸುವ ಸಲುವಾಗಿ ಎಲ್ಲಾ ಪ್ರಮುಖ ವಹಿವಾಟುಗಳಿಗೆ UPI, ಡಿಜಿಟಲ್ ವ್ಯಾಲೆಟ್‌ಗಳನ್ನ ಕಡ್ಡಾಯಗೊಳಿಸುವ ಸಾಧ್ಯತೆ ಇದೆ. ಆದಾಯ ತೆರಿಗೆ ರಿಟರ್ನ್ಸ್‌ಗಾಗಿ ಪೂರ್ವ ತುಂಬಿದ ನಮೂನೆಗಳನ್ನು ಒದಗಿಸಲು ಸರ್ಕಾರ ಚಿಂತನೆ ನಡೆಸಿದೆ. ಇದರಿಂದ ರಿಟರ್ನ್ಸ್ ಫೈಲಿಂಗ್ ಇನ್ನೂ ಸುಲಭ ಮತ್ತು ವೇಗವಾಗಿ ಮಾಡಲು ಸಾಧ್ಯವಾಗಿದೆ. ಸಣ್ಣ ವ್ಯವಹಾರಗಳಿಗೆ ಮಾಸಿಕ GST ಫೈಲಿಂಗ್ ಬದಲಿಗೆ ತ್ರೈಮಾಸಿಕ ಫೈಲಿಂಗ್ ಸುಲಭಗೊಳಿಸುವ ಸಾಧ್ಯತೆ ಇದೆ. ಎಲೆಕ್ಟ್ರಿಕ್ ವಾಹನಳಿಗೆ ಮುಂದಿನ ತಿಂಗಳಿನಿಂದ ಹೊಸ ಸಬ್ಸಿಡಿ ಯೋಜನೆಯನ್ನು ಜಾರಿಗೆ ತರಲಾಗುವುದು. ಇಷ್ಟೇ ಅಲ್ಲದೇ, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಪಾರದರ್ಶಕತೆ ತರಲು ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗುವುದು. ಬ್ಯಾಂಕ್ ಖಾತೆ KYC ಪ್ರಕ್ರಿಯೆಯನ್ನು ಹೆಚ್ಚು ಕಠಿಣಗೊಳಿಸಲು ಬ್ಯಾಂಕುಗಳು ಯೋಜಿಸುತ್ತಿವೆ. ಗ್ರಾಹಕರು ಪ್ರತಿ 5 ವರ್ಷಗಳಿಗೊಮ್ಮೆ KYC ಅನ್ನು ನವೀಕರಿಸುವುದು ಕಡ್ಡಾಯವಾಗಿದೆ. ಆರೋಗ್ಯ ಮತ್ತು ಫಿಟ್‌ನೆಸ್ ಅನ್ನು ಉತ್ತೇಜಿಸಲು ಸರ್ಕಾರವು ರಾಷ್ಟ್ರೀಯ ಸ್ವಾಸ್ಥ್ಯ ನೀತಿಯನ್ನು ಜಾರಿಗೆ ತರಲಿದೆ. ಇದರ ಅಂಗವಾಗಿ ಆರೋಗ್ಯ ತಪಾಸಣೆ ಮತ್ತು ಯೋಗ ಕಾರ್ಯಕ್ರಮಗಳಿಗೆ ಸಹಾಯಧನ ನೀಡಲಾಗುತ್ತದೆ.
ಚಿತಾಭಸ್ಮದಲ್ಲಿ ಗಾಂಜಾ ಬೆಳೆದು, ದಮ್ಮೆಳೆದ ಮಗಳು: ಅಪ್ಪನ ಅಂತಿಮ ಆಸೆಯಂತೆ! ಶಾಕಿಂಗ್ ವಿಡಿಯೋ ವೈರಲ್
ಮಾಲ್ಡೀವ್ಸ್ ಇನ್ನು ದುಬಾರಿ
ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಮಾಲ್ಡೀವ್ಸ್, ದ್ವೀಪಸಮೂಹಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ವಿಧಿಸುವ ಶುಲ್ಕವನ್ನು ಹೆಚ್ಚಿಸುತ್ತಿದೆ. ಎಕಾನಮಿ-ಕ್ಲಾಸ್ ಪ್ರಯಾಣಿಕರಿಗೆ, ಶುಲ್ಕವು $ 30 (Rs 2,532) ನಿಂದ $ 50 (Rs 4,220) ಕ್ಕೆ ಏರುತ್ತದೆ, ಆದರೆ ವ್ಯಾಪಾರ-ವರ್ಗದ ಪ್ರಯಾಣಿಕರು $ 60 (Rs 5,064) ನಿಂದ $ 120 (Rs 10,129) ಗೆ ಹೆಚ್ಚಳವನ್ನು ಕಾಣುತ್ತಾರೆ. ಪ್ರಥಮ ದರ್ಜೆಯ ಪ್ರಯಾಣಿಕರು $240 (Rs 20,257) ಪಾವತಿಸುತ್ತಾರೆ, ಇದು $90 (Rs 7,597), ಮತ್ತು ಖಾಸಗಿ ಜೆಟ್ ಪ್ರಯಾಣಿಕರು $120 (Rs 10,129) ರಿಂದ $480 (Rs 40,515) ಗೆ ಗಮನಾರ್ಹ ಏರಿಕೆಯನ್ನು ಎದುರಿಸುತ್ತಾರೆ.