
ಅಮಿತ್ ಶಾ ಜೊತೆ ಮಾತುಕತೆ ವೇಳೆ ರೆಡ್ಡಿ ಪಾರ್ಟಿ ಸೇರುವ ಬಗ್ಗೆ ನಿರ್ಣಯ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ತಕ್ಕ ಮಟ್ಟಿಗೆ ಏಟು ನೀಡಿದ್ದ ರೆಡ್ಡಿ
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಆಗದಂತೆ ತಡೆಯಲು ಪ್ಲಾನ್
ಶಾಸಕ ಜನಾರ್ದನ ರೆಡ್ಡಿ ಇಂದು ಬಿಜೆಪಿ(BJP) ಸೇರ್ಪಡೆ ಆಗಲಿದ್ದಾರೆ. ಮಲ್ಲೇಶ್ವರಂನಲ್ಲಿರುವ ಪಾರ್ಟಿ ಕಚೇರಿಯಲ್ಲಿ ಸೇರ್ಪಡೆಯಾಗಲಿದ್ದು, ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ(B Y Vijayendra) ಸಮ್ಮುಖದಲ್ಲಿ ಬಿಜೆಪಿಗೆ ರೆಡ್ಡಿ ಮರುಪ್ರವೇಶ ಮಾಡಲಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ ಅಮಿತ್ ಶಾರನ್ನು ಜನಾರ್ದನ ರೆಡ್ಡಿ(MLA Janardhana Reddy) ಭೇಟಿಯಾಗಿದ್ದರು. ಮತ್ತೆ ಬಿಜೆಪಿ ಸೇರುವ ಬಗ್ಗೆ ಪಾರ್ಟಿ ವಲಯದಲ್ಲಿ ಚರ್ಚೆಯಾಗುತ್ತಿತ್ತು. ಬಿಜೆಪಿಯಲ್ಲಿ ಪಾರ್ಟಿ ಮರ್ಜ್ ಮಾಡುವ ಬಗ್ಗೆ ಘೋಷಣೆಯನ್ನು ಜನಾರ್ದನ ರೆಡ್ಡಿ ಮಾಡಿದ್ದರು. ಮೊನ್ನೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದ ರೆಡ್ಡಿ, ಆ ಮೂಲಕ ಕಾಂಗ್ರೆಸ್‌ಗೆ(Congress) ಹತ್ತಿರ ಆಗುವ ಮುನ್ಸೂಚನೆ ನೀಡಿದ್ದರು. ಆದ್ರೆ ಈ ಬೆಳವಣಿಗೆ ಮಧ್ಯೆ ಕಳೆದ ವಾರ ಅಮಿತ್ ಜೊತೆ ಭೇಟಿಯಾಗಿ ಮಾತುಕತೆ ನಡೆಸಿದ್ರು. ರೆಡ್ಡಿಯನ್ನ ಬಿಜೆಪಿಗೆ ಕರೆತರಲು ರಾಮುಲು ಹೆಚ್ಚು ಆಸಕ್ತಿ ಹೊಂದಿಲ್ಲ. ಆದರೆ ಬಳ್ಳಾರಿ ಅಭ್ಯರ್ಥಿ ಆಗಿರುವ ಶ್ರೀರಾಮುಲುಗೆ ರೆಡ್ಡಿ ಸಹಕಾರ ಅಗತ್ಯವಾಗಿದೆ. ಹೀಗಾಗಿ ರೆಡ್ಡಿ ಬೆಂಬಲವನ್ನು ರಾಜ್ಯ ಬಿಜೆಪಿ ಬಯಸಿದೆ.
ಇದನ್ನೂ ವೀಕ್ಷಿಸಿ: Loksabha Eection 2024: ಬಿಜೆಪಿ 5ನೇ ಲಿಸ್ಟ್‌ನಲ್ಲಿ ನಟಿ ಕಂಗನಾಗೆ ಟಿಕೆಟ್: ಉತ್ತರ ಪ್ರದೇಶ ಅಖಾಡದಿಂದ ಗಾಂಧಿ ಪರಿವಾರ ದೂರ..!