ಚಾರ್ಜ್‌ಶೀಟಲ್ಲಿ ಸ್ಫೋಟಕ ರಹಸ್ಯ: ಚುನಾವಣಾ ವರ್ಷದಲ್ಲಿ ಬಂಡೆಗೆ ಕಾದಿದ್ಯಾ ಅತಿ ದೊಡ್ಡ ಕಂಟಕ..?

Jun 25, 2022, 7:31 PM IST

ಬೆಂಗಳೂರು, (ಜೂನ್.25): ಅದೇ ಕಣ್ಣು... ಅದೊಂದೇ ಕಣ್ಣು... ಬೇಟೆಗಾರನನ್ನೇ ಬೇಟೆಯಾಡ್ತಿರೋ ಆ ಕಣ್ಣು. ಕನಕಪುರದ ರಣಬೇಟೆಗಾರ ಡಿಕೆ ಶಿವಕುಮಾರ್, ಮತ್ತೆ ಸಂಕಷ್ಟಕ್ಕೆ ಸಿಲುಕೋ ಎಲ್ಲಾ ಸೂಚನೆಗಳು ಸಿಗ್ತಾ ಇವೆ. ಈಗಾಗ್ಲೇ ಐಟಿ, ಇಡಿ, ಸಿಬಿಐ... ಹೀಗೆ ಒಂದರ ಮೇಲೊಂದರಂತೆ ಚಕ್ರವ್ಯೂಹಗಳಲ್ಲಿ ಸಿಕ್ಕಿ ಒದ್ದಾಡ್ತಿರೋ ಡಿಕೆಶಿ, ಮತ್ತೆ ಕಂಟಕ ತಂದಿಟ್ಟಿರೋದು ಅದೇ ಕಣ್ಣು... 

ಚಾರ್ಜ್ ಶೀಟ್ ಜತೆಗೆ ಟ್ರಂಕ್‌ನಲ್ಲಿ ಕೋರ್ಟ್‌ಗೆ ಡಿಕೆಶಿಯ ಆಸ್ತಿ ಲೆಕ್ಕ ಕೊಟ್ಟ ಇಡಿ

E.D ವ್ಯೂಹದಲ್ಲಿ ಬಂಧಿಯಾಗಿ ತಿಹಾರ್ ಜೈಲು ಪಾಲಾಗಿದ್ದ ಡಿಕೆ ಶಿವಕುಮಾರ್'ಗೆ ಮತ್ತೆ ಅದೇ ಭಯ, ಆತಂಕ ಶುರುವಾಗಿದೆ. ಕಲ್ಲನ್ನೇ ಕುಟ್ಟಿ ಪುಡಿ ಮಾಡಬಲ್ಲ ತಾಕತ್ತಿರೋ ಬಂಡೆಯಂಥಾ ಬಂಡೆಯನ್ನೇ ಬೆಚ್ಚಿ ಬೀಳಿಸಿರೋದು ಮತ್ತದೇ ಮತ್ತದೇ E.D ಇಕ್ಕಳ. ಹೌದು ವೀಕ್ಷಕರೇ... ಹವಾಲ ದುಡ್ಡು,. ಅಕ್ರಮ ಹಣ ವರ್ಗಾವಣೆ ಕೇಸ್"ನಲ್ಲಿ ಡಿಕೆ ಶಿವಕುಮಾರ್ ವಿರುದ್ಧ ತನಿಖೆ ನಡೆಸಿದ್ದ ಜಾರಿ ನಿರ್ದೇಶನಾಲಯ, ಈಗಾಗ್ಲೇ ಕೋರ್ಟ್"ಗೆ ಜಾರ್ಜ್"ಶೀಟ್ ಸಲ್ಲಿಸಿರೋ ವಿಚಾರ ನಿಮ್ಗೆ ಗೊತ್ತೇ ಇದೆ. ಒಟ್ಟು 58 ಪುಟಗಳ ಆ ಜಾರ್ಜ್'ಶೀಟ್ ಫೈಲ್ ಸುವರ್ಣನ್ಯೂಸ್"ಗೆ ಲಭ್ಯವಾಗಿದ್ದು, ಡಿಕೆ ಕೋಟೆಯ ಒಂದೊಂದೇ ರಹಸ್ಯಗಳನ್ನು ಬಿಚ್ಚಿಟ್ಟಿದೆ ಆ ಜಾರ್ಜ್'ಶೀಟ್.