ಕೇಂದ್ರ ಸಚಿವರ ವಿರುದ್ಧ ಕಾಂಗ್ರೆಸ್ ಪ್ಲ್ಯಾನ್ ಚೇಂಜ್!? ಲೋಕ ಸಮರಕ್ಕೆ ದಿಂಗಾಲೇಶ್ವರ ಶ್ರೀ ಎಂಟ್ರಿ! ಏನಿದು ಬಿಗ್ ಟ್ವಿಸ್ಟ್?

Apr 10, 2024, 10:23 AM IST

ಧಾರವಾಡ ಲೋಕಸಭಾ(Loksabha) ಕ್ಷೇತ್ರ ಕ್ಷಣ ಕ್ಷಣಕ್ಕೂ ರಂಗೇರುತ್ತಿದೆ. ಕಾರಣ ದಿಂಗಾಲೇಶ್ವರ ಸ್ವಾಮೀಜಿ(Sri Dingaleshwara Swamiji) ಪಕ್ಷೇತರರಾಗಿ ನಿಲ್ಲೋದು ಖಚಿತವಾಗಿದೆ. ಇದನ್ನರಿತ ಕಾಂಗ್ರೆಸ್(Congress), ಜೋಶಿ (Pralhad Joshi)ವಿರುದ್ಧ ಅಹಿಂದ ಮತಗಳ ಕ್ರೂಢೀಕರಣಕ್ಕೆ ಹೊಸ ಪ್ಲ್ಯಾನ್ ರೆಡಿ ಮಾಡಿಕೊಂಡಿದೆ. ಹಾಗಾದ್ರೆ ಕಾಂಗ್ರೆಸ್ ಕುರುಬ ಸುಮುದಾಯದ ಅಸೂಟಿಗೆ ಕೊಟ್ಟಿರೋ ಬಿ ಫಾರ್ಮ್‌ನನ್ನ, ದಿಂಗಾಲೇಶ್ವರರಿಗೆ ಕೊಡುವ ಪ್ಲಾನ್‌ನಲ್ಲಿ ಇದೆ ಎನ್ನಲಾಗ್ತಿದೆ. ದಿಂಗಾಲೇಶ್ವರ ಸ್ವಾಮೀಜಿಗಳು ಧಾರವಾಡದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿರುವ ನಿರ್ಧಾರ ಮಾಡಿದ್ದಾರೆ. ಆದ್ರೆ ಬಿಜೆಪಿ(BJP) ಭದ್ರಕೋಟೆ ಭೇಧಿಸಲು ಅಹಿಂದ ಅಸ್ತ್ರಕ್ಕೆ ಸಿದ್ಧಪಡಿಸಿಕೊಂಡಿದ್ದ ಕಾಂಗ್ರೆಸ್, ತನ್ನ ಪ್ಲ್ಯಾನ್ ಚೇಂಜ್ ಮಾಡಲಿದೆಯಾ ಅನ್ನೋ ಚರ್ಚೆ ಶುರುವಾಗಿದೆ. ಧಾರವಾಡ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಇಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕ. ಆದ್ರೆ ಈ ಸರ್ತಿ ದಿಂಗಾಲೇಶ್ವರ ಸ್ವಾಮೀಜಿಗಳು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸ್ತಿರೋದ್ರಿಂದ ಗೇಮ್ ಚೇಂಜ್ ಆಗಲಿದೆ ಎನ್ನಲಾಗ್ತಿದೆ.

ಇದನ್ನೂ ವೀಕ್ಷಿಸಿ:  Bellulli Kabab Chandru: ಯುಗಾದಿ ಹಬ್ಬದಲ್ಲಿ ಕಬಾಬ್ ಚಂದ್ರು ಹೊಸ್ತಡ್ಕು! ಬಾಡೂಟ ಮಾಡಿ ಒನ್ ಮೋರ್ ಒನ್ ಮೋರ್ ಅನ್ನಿ!