ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಗುರುವಾರ, ತ್ರಯೋದಶಿ ತಿಥಿ, ಪುಬ್ಬ ನಕ್ಷತ್ರ.
ಭಾದ್ರಪದ ಮಾಸದ ತ್ರಯೋದಶಿ ಶಿವನ ಒಲುಮೆಗೆ ಪಾತ್ರರಾಗಲು ಇರುವ ಸುಸಂದರ್ಭವಾಗಿದೆ. ಇಂದು ಸಂಧ್ಯಾಕಾಲದಲ್ಲಿ ತಪ್ಪದೇ ಶಿವನ ಪ್ರಾರ್ಥನೆ ಮಾಡಿ. ಈ ದಿನ ಮಕರ ರಾಶಿಯವರ ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಆಗಲಿದೆ. ವೃತ್ತಿಯಲ್ಲಿ ಹೋರಾಟ ಮಾಡಬೇಕಾಗುತ್ತದೆ. ಹಿರಿಯರಿಂದ ಉತ್ತಮ ಉಪದೇಶ ದೊರೆಯಲಿದೆ. ಈ ದಿನ ಮಿಶ್ರಫಲವಿದ್ದು, ಈಶ್ವರನಿಗೆ ಅಕ್ಕಿ ದಾನ ಮಾಡಿ.
ಇದನ್ನೂ ವೀಕ್ಷಿಸಿ: News Hour ಗಾಜಾ ಪಟ್ಟಿಯನ್ನು ಸ್ಮಶಾನ ಮಾಡಿದ ಇಸ್ರೇಲ್, 12 ಸಾವಿರ ಕಟ್ಟಡ ಧ್ವಂಸ!