ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ಮಂಗಳವಾರ, ಪ್ರತಿಪದ್ ತಿಥಿ, ಅನುರಾಧಾ ನಕ್ಷತ್ರ.
ಇಂದು ಬಲಿ ಪಾಡ್ಯಮಿ ಇದ್ದು, ನಮ್ಮೆಲ್ಲರ ಬಾಳಿಗೆ ಹೊಸ ದಾರಿಯನ್ನು ನಿರ್ಮಾಣ ಮಾಡುವ ಕಾಲವಾಗಿದೆ. ಈ ಸಮಯದಲ್ಲಿ ಎಷ್ಟೋ ಜನ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಆರೋಗ್ಯಕ್ಕಾಗಿ ಇಂದು ಸೂರ್ಯನನ್ನು ಪ್ರಾರ್ಥಿಸಿ. ಬಲಿ ಚಕ್ರವರ್ತಿ ಇಂದು ನಮ್ಮೆಲ್ಲಾರನ್ನು ನೋಡಲು ಬರುತ್ತಾನಂತೆ. ಹಾಗಾಗಿ ಅವನನ್ನು ಸ್ವಾಗತಿಸಲು ಇಂದು ಎಲ್ಲಾ ಹೊಸ ಬಟ್ಟೆ ಧರಿಸಿ, ಸ್ವಾಗತಿಸಬೇಕಂತೆ. ಬಲಿ ಭೂ ಮಂಡಲವನ್ನು ಆಳುತ್ತಿದ್ದ, ಇಂದ್ರನನ್ನು ಬಲಿ ಹಾಕಿದ ಕಾರಣ ಆತನನ್ನು ಬಲೀಂದ್ರ ಎಂದು ಕರೆಯಲಾಗುತ್ತದೆ.
ಇದನ್ನೂ ವೀಕ್ಷಿಸಿ: ನ.15ಕ್ಕೆ ಪ್ರಮುಖ ನಾಯಕರು ಪಕ್ಷ ಸೇರ್ಪಡೆ, ಲೋಕಸಭೆ ಚುನಾವಣೆಗೆ ಡಿಕೆಶಿ ಹೊಸ ರಣತಂತ್ರ!