ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಭಾನುವಾರ, ಚತುರ್ದಶಿ ತಿಥಿ, ಆರಿದ್ರಾ ನಕ್ಷತ್ರ.
ಭಾನುವಾರ ಆರಿದ್ರಾ ನಕ್ಷತ್ರ ಇದ್ದು, ಮಾಸ ಶಿವರಾತ್ರಿ ಕೂಡ ಇದೆ. ಭಾನುವಾರ ಸೂರ್ಯನ ವಾರವಾಗಿದೆ, ಆರೋಗ್ಯಕ್ಕಾಗಿ ಈತನ ಆರಾಧನೆ ಮಾಡಿ. ಶಿವ ಎಲ್ಲಾ ರೋಗಗಳಿಗೆ ಮದ್ದಾಗಿದ್ದಾನೆ. ಹಾಗಾಗಿ ಶಿವ ಕವಚವನ್ನು ಹೇಳಿ ಅಥವಾ ಕೇಳಿಸಿಕೊಳ್ಳಿ. ಇದರಿಂದ ನಮಗೆ ಎಲ್ಲಾ ರೀತಿಯಲ್ಲೂ ರಕ್ಷಣೆ ಸಿಗುತ್ತದೆ. ತುಂಬಾ ತೀವ್ರವಾದ ಕಾಯಿಲೆ ಇರುವವರು 1008 ಅಥವಾ 108 ಬಾರಿ ಮೃತ್ಯುಂಜಯ ಮಂತ್ರವನ್ನು ಜಪಿಸಿ.
ಇದನ್ನೂ ವೀಕ್ಷಿಸಿ: ಲೋಕಸಮರದ ಬಗ್ಗೆ ಬಹಿರಂಗವಾಗಿ ಆಸೆ ಬಿಚ್ಚಿಟ್ಟ ವಿ.ಸೋಮಣ್ಣ