Aug 20, 2023, 8:46 AM IST
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲ ಪಕ್ಷ, ಭಾನುವಾರ, ಚತುರ್ಥಿ ತಿಥಿ, ಹಸ್ತ ನಕ್ಷತ್ರ.
ಈ ದಿನ ನಾಗರ ಚೌತಿ ಇದ್ದು, ನಾಳೆ ನಾಗ ಪಂಚಮಿ ಇದೆ. ನಾಗರ ಚೌತಿಯಂದು ಹುತ್ತಕ್ಕೆ ಹೋಗಿ ಹಾಲನ್ನು ಹಾಕಲಾಗುತ್ತದೆ. ಹುತ್ತದ ಮಣ್ಣು ತುಂಬಾ ಶ್ರೇಷ್ಠವಾಗಿದೆ. ಪೂಜೆಗೆ ಎಷ್ಟು ಬೇಕೋ ಅಷ್ಟೇ ಹಾಲನ್ನು ಹಾಕಿ, ಈ ದಿನ ಉಪವಾಸ ಇರಿ. ನಾಗನ ಆರಾಧನೆಯನ್ನು ತುಂಬಾ ಒಳ್ಳೆಯ ಮನಸ್ಸಿನಿಂದ ಮಾಡಿ. ಈ ದಿನ ನಾಗನನ್ನು ಪೂಜಿಸುವ ಉದ್ದೇಶವೆಂದರೇ, ವಿಷ ಜಂತುಗಳಿಂದ ನಮಗೆ ಯಾವುದೇ ತೊಂದರೆ ಬಾರದಿರಲಿ ಎಂಬುದಾಗಿದೆ.
ಇದನ್ನೂ ವೀಕ್ಷಿಸಿ: Bengaluru Airport: ಏಷ್ಯಾದ ಮೊದಲ ಗಾರ್ಡನ್ ಟರ್ಮಿನಲ್‌ನ ವಿಶೇಷತೆ ಬಲ್ಲೀರಾ?