ಕುಜನ ಸ್ಥಾನ ಪಲ್ಲಟ, ಚೀನಾ ಭಾರತ ಬಿಕ್ಕಟ್ಟಿಗೆ ಗ್ರಹ ಲಕ್ಷಣಗಳೂ ಕಾರಣ: ಮುಂದೇನಾಗುತ್ತೆ?

Jun 18, 2020, 9:54 AM IST

ಬೆಂಗಳೂರು(ಜೂ.18): ಇದೊಂದು ವಿಶಿಷ್ಟವಾದ ದಿನ. ಯಾವುದನ್ನು ನಾವು ಭಚಕ್ರ ಅಥವಾ ಕುಂಡಲಿ ಅನ್ನುತ್ತೇವೋ ಅಲ್ಲಿ ಇಷ್ಟು ದಿನ ಕುಜ ತನ್ನ ಶತ್ರು ರಾಶಿಯಾದ ಕುಂಭ ರಾಶಿಯಲ್ಲಿದ್ದ. ಆದರೀಗ ಕುಜ ತನ್ನ ಸ್ಥಾನ ಪಲ್ಲಟ ಮಾಡುತ್ತಿದ್ದಾನೆ. ಕುಂಭ ರಾಶಿ ತೊರೆದು ತನ್ನ ಮಿತ್ರ ಎರಾಶಿಯಾದ ಮೀನ ರಾಶಿ ಪ್ರವೇಶಿಸುತ್ತಿದ್ದಾನೆ. ಈ ಗ್ರಹದ ಪಲ್ಲಟ ಕಣ್ಣು ಮುಂದೆ ಹಲವು ಅಂಶಗಳನ್ನು ತೆರೆದಿಡುತ್ತದೆ. 

ಮೀನ ರಾಶಿಯನ್ನು ದಿಕ್ಕುಗಳಲ್ಲಿ ಗಮನಿಸಿದಾಗ, ಎಂಟು ದಿಕ್ಕುಗಳನ್ನು ರಾಶಿಯಿಂದ ಗುರುತಿಸುವುದಾದರೆ ಮೀನ ರಾಶಿ ಈಶಾನ್ಯ ಭಾಗ ಎಂದು ಗುರುತಿಸುತ್ತೇವೆ. ಸದ್ಯ ಈಶಾನ್ಯ ಭಾಗದಲ್ಲಿ ಎಂತಹ ಅವಘಡ ಸಂಭವಿಸಿದೆ ಎಂದು ಪತ್ರಿಕೆಗಳಲ್ಲಿ ನೋಡಬಹುದು. ಇದು ಒಂದು ರೀತಿಯಲ್ಲಿ ಬಿಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾದ್ರೆ ಚೀನಾ ಜೊತೆಗಿನ ಬಿಕ್ಕಟ್ಟಿಗೆ ಕಾರಣವಾಗಿದ್ದು ಗ್ರಹ ಲಕ್ಷಣಗಳಾ? ಮುಂದೇನಾಗುತ್ತೆ? ಯುದ್ಧವಾಗುತ್ತಾ? ಪರಿಸ್ಥಿತಿ ಶಮನವಾಗುತ್ತಾ? ಸಂಪೂರ್ಣ ಮಾಹಿತಿಗಾಗಿ ವಿಡಿಯೋ ಕ್ಲಿಕ್ ಮಾಡಿ