
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಶನಿವಾರ, ಚತುರ್ದಶಿ ತಿಥಿ, ಧನಿಷ್ಠ ನಕ್ಷತ್ರ.
ಶಿವ ಎಂದರೇ ಮಂಗಳ ಎಂದರ್ಥ. ನಮ್ಮ ಬದುಕು ಮಂಗಳಮಯವಾಗಬೇಕು ಎಂದರೇ ಪರಶಿವನ ಆರಾಧನೆಯನ್ನು ಪ್ರತಿದಿನ ಮಾಡಿ. ಈಶ್ವರನಿಗೆ ಅಭಿಷೇಕವನ್ನು ಮಾಡಿಸಿ. ಪರಮೇಶ್ವರ ಕಷ್ಟಗಳನ್ನು ಕಳೆಯುವವನು ಆಗಿದ್ದಾನೆ. ಕರ್ಕಟಕ ರಾಶಿಯವರಿಗೆ ಇಂದು ವ್ಯಥೆ-ದುಃಖ ಇರಲಿದೆ. ಸ್ತ್ರೀಯರಿಗೆ ಸೋಲುಂಟಾಗಲಿದೆ. ವೃತ್ತಿಯಲ್ಲಿ ಅನುಕೂಲ. ತಂದೆ-ಮಕ್ಕಳಲ್ಲಿ ಮನಸ್ತಾಪ. ಅಮ್ಮನವರಿಗೆ ಅಭಿಷೇಕ ಮಾಡಿಸಿ.
ಇದನ್ನೂ ವೀಕ್ಷಿಸಿ: ಅಯೋಧ್ಯೆಯಲ್ಲಿ ಸ್ಯಾಂಡಲ್‌ವುಡ್ ಶ್ರೀಮನ್ನಾರಾಯಣ: ರಾಮನ ಕಣ್ಣೇ ಮಹಾದ್ಭುತ ಎಂದ ರಕ್ಷಿತ್ ಶೆಟ್ಟಿ!