ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ,ಗುರುವಾರ, ದ್ವಿತೀಯ ತಿಥಿ, ಮೂಲ ನಕ್ಷತ್ರ.
ಗುರುವಾರ ಮಾರ್ಗಶಿರ ಮಾಸ ಇರುವುದರಿಂದ ಲಕ್ಷ್ಮೀ ಪ್ರಾರ್ಥನೆ ಮಾಡಿ. ಇದು ತುಂಬಾ ಶ್ರೇಷ್ಠವಾದ ವ್ರತವಾಗಿದೆ. ಕನ್ಯಾ ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲ. ಲಾಭದ ದಿನ. ಶಿಕ್ಷಣ ಕ್ಷೇತ್ರದವರಿಗೆ ಅನುಕೂಲ. ಕೃಷಿಕರಿಗೆ ಲಾಭ. ಹಾಲು-ಹೈನುಗಾರರಿಗೆ ಲಾಭ. ಉದರ ಬಾಧೆ. ಆಹಾರದಲ್ಲಿ ವ್ಯತ್ಯಾಸ. ಕಲಾವಿದರಿಗೆ ಅನುಕೂಲ. ಮಕ್ಕಳ ಬಗ್ಗೆ ಎಚ್ಚರವಿರಲಿ. ಲಲಿತಾ ಪ್ರಾರ್ಥನೆ ಮಾಡಿ. ತುಲಾ ರಾಶಿಯವರು ದೇವತಾಕಾರ್ಯಗಳಲ್ಲಿ ಭಾಗಿ. ಸಹೋದರರಲ್ಲಿ ಸಹಕಾರ. ವೃತ್ತಿಯಲ್ಲಿ ಅನುಕೂಲ. ಮಕ್ಕಳ ಸಹಾಯ. ಬಂಧು-ಸ್ನೇಹಿತರೇ ವೈರಿಗಳಾಗುತ್ತಾರೆ. ವಿಷ್ಣು ಸಹಸ್ರನಾಮ ಪಠಿಸಿ.
ಇದನ್ನೂ ವೀಕ್ಷಿಸಿ: News Hour: ಸಂಸದೀಯ ಇತಿಹಾಸದಲ್ಲೇ ಅತಿದೊಡ್ಡ ಭದ್ರತಾ ಲೋಪ, ದಾಳಿಕೋರರಿಗೆ ಮೈಸೂರು ಲಿಂಕ್!