ಸಿರಿಮನೆ ಫಾಲ್ಸ್‌ನಲ್ಲಿ ಪ್ರವಾಸಿಗರ ಅಸಭ್ಯ ವರ್ತನೆ; ಸ್ಥಳೀಯರಿಂದ ಗೂಸಾ

Jul 2, 2019, 11:59 AM IST

ಶೃಂಗೇರಿ ತಾಲೂಕಿನ ಕಿಗ್ಗ ಸಮೀಪ ಇರೋ ಸಿರಿಮನೆ ಫಾಲ್ಸ್ ಪ್ರವಾಸಿಗರನ್ನು ಸದಾ ಕೈ ಬೀಸಿ ಕರೆಯುತ್ತದೆ. ದಟ್ಟ ಕಾನನ ಮಧ್ಯೆ ಧುಮುಕುವ ನೀರು ಎಲ್ಲರನ್ನೂ ತನ್ನೆಡೆಗೆ ಆಕರ್ಷಿಸುತ್ತದೆ. ಇಲ್ಲಿಗೆ ಭೇಟಿ ನೀಡಿದ ಬೆಂಗಳೂರು ಮೂಲದ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಮಂಗಳೂರು ಯುವಕರಿಗೆ ಸ್ಥಳೀಯರು ಥಳಿಸಿದ್ದಾರೆ. ಫಾಲ್ಸ್‌ನಲ್ಲಿ ಸ್ನಾನ ಮಾಡುತ್ತಿದ್ದ ಯುವಕರು ಮಹಿಳಾ ಪ್ರವಾಸಿಗರನ್ನು ಎಳೆದು, ಚುಂಬಿಸಲು ಯತ್ನಿಸಿದ್ದಾರೆಂಬುವುದು ಸ್ಥಳೀಯರ ಆರೋಪ.