ಟ್ರಬಲ್‌ಶೂಟರ್‌ ಡಿಕೆಶಿಗೆ ಮತ್ತೊಂದು ಬಿಗ್ ಟ್ರಬಲ್!

Mar 5, 2019, 5:12 PM IST

ಬೇನಾಮಿ ಆಸ್ತಿ ಸುಳಿಯಲ್ಲಿ ಸಿಲುಕಿರುವಂತಹ ಕಾಂಗ್ರೆಸ್‌ನ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್‌ಗೆ ಇನ್ನೊಂದು ಸಂಕಷ್ಟ ಎದುರಾಗಿದೆ. ಜಾರಿ ನಿರ್ದೇಶನಾಲಯ [ಇ.ಡಿ] ಜೊತೆಗೆ ಈಗ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ. ಬೇನಾಮಿ ಆಸ್ತಿಗೆ ಸಂಬಂಧಿಸಿ 15 ದಿನಗಳಲ್ಲಿ ಉತ್ತರಿಸದಿದ್ದರೆ, ಆಸ್ತಿ ಜಪ್ತಿ ಮಾಡಲಾಗುವುದೆಂದು ಡಿಕೆಶಿಗೆ ಸೂಚಿಸಲಾಗಿದೆ.