ಕಾಂಗ್ರೆಸ್ ಮುಖಂಡನ ಭೂಗಳ್ಳತನ : 410 ಎಕರೆ ನುಂಗಿದ ನಾಯಕ

Mar 15, 2019, 10:19 AM IST

ಅಂದು ತುಂಡು ಭೂಮಿಯೂ ಇಲ್ಲವೆಂದು ಸರ್ಕಾರಿ ಭೂಮಿ ಪಡೆದಿದ್ದ ಕಾಂಗ್ರೆಸ್ ನಾಯಕ ಇಂದು ಬರೋಬ್ಬರಿ 410 ಎಕರೆ ಒಡೆಯ. ಕಾಂಗ್ರೆಸ್  ಮುಖಂಡ KH  ಮುನಿಯಪ್ಪ ಬೇನಾಮಿ ಹೆಸರಿನಲ್ಲಿ ಸರ್ಕಾರಿ ಭೂಮಿಯನ್ನು ಗುಳುಂ ಮಾಡಿದ ಸ್ಟೋರಿಯನ್ನು ಬಯಲು ಮಾಡಿದೆ ಸುವರ್ಣ ನ್ಯೂಸ್.

7 ಬಾರಿ ಸಂಸದರಾಗಿ ಆಯ್ಕೆಯಾಗಿರುವ K.H.ಮುನಿಯಪ್ಪ ಭಾರೀ ಭೂಗಳ್ಳತನ ಮಾಡಿದ್ದು, ಒಂದೇ ಊರಿನಲ್ಲಿ 410 ಎಕರೆ ಒಡೆಯರಾಗಿದ್ದಾರೆ. ಸರ್ಕಾರದಿಂದ 4 ಎಕರೆ ಪಡೆದುಕೊಂಡಿದ್ದ ನಾಯಕ ತಮ್ಮ ಜಮೀನನ್ನು ನೂರಾರು ಪಟ್ಟು ವಿಸ್ತರಿಸಿಕೊಂಡಿದ್ದಾರೆ. 

2005 , 2006ರಲ್ಲಿ ಸೋದರರು, ಪತ್ನಿ, ಮಕ್ಕಳ ಹೆಸರಲ್ಲಿ 83 ಎಕರೆ ಖರೀದಿಸಿದ್ದ ಸಂಸದ,  ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ಗೊರಮಿಳ್ಳಹಳ್ಳಿಯಲ್ಲಿಯೂ ಇದೀಗ ಜಮೀನು ಹೊಂದಿದ್ದಾರೆ. 

ಲೋಕಸಭಾ ಚುನಾವಣೆ ಸಮೀಪಿಸಿದ ಈ ವೇಳೆ ಆಯೋಗದ ಮುಂದೆ ಆಸ್ತಿ ಘೋಷಣೆ ಮಾಡಿಕೊಳ್ಳದ ಮುನಿಯಪ್ಪ, ಅಫಿಡವಿಟ್ನಲ್ಲಿ ತಮ್ಮ ಮತ್ತು ಪತ್ನಿ ಹೆಸರಿನ ಜಮೀನಿನ ಬಗ್ಗೆ ಮಾತ್ರವೇ ಮಾಹಿತಿ ನೀಡಿದ್ದಾರೆ.  ಮುನಿಯಪ್ಪ ಭೂಗಳ್ಳತನದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.