ಕನಕಪುರದಲ್ಲಿ ಉಮಾಪತಿ ಫಿಲ್ಮ್ ಸಿಟಿ ನಿರ್ಮಾಣ; ಮುಂದಿನ ವರ್ಷದಿಂದಲೇ ಶೂಟಿಂಗ್.!

Aug 14, 2021, 1:44 PM IST

ಬೆಂಗಳೂರು (ಆ. 14):  ಕನ್ನಡ ಚಿತ್ರ ನಿರ್ಮಾಪಕ ಉಮಾಪತಿ ಸ್ಯಾಂಡಲ್‌ವುಡ್‌ಗೆ ಕೊಡುಗೆ ನೀಡಿದ್ದಾರೆ. ಸಿನಿಮಾ ಶೂಟಿಂಗ್‌ಗೆ ಅನುಕೂಲವಾಗುವಂತೆ ಕನಕಪುರದ ಬಳಿಯ 25 ಎಕರೆ ಜಾಗದಲ್ಲಿ  ಫಿಲ್ಮಂ ಸಿಟಿ   ನಿರ್ಮಾಣಕ್ಕೆ ಮುಂದಾಗಿದ್ದಾರೆ. 

ಮತ್ತೆ ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್; ಮಿನಿ ಬಿಗ್ ಬಾಸ್ ಇಂದಿನಿಂದ ಶುರು

175 ಕೋಟಿ ವೆಚ್ಚದಲ್ಲಿ ಫಿಲ್ಮ್‌ ಸಿಟಿ ನಿರ್ಮಾಣವಾಗುತ್ತಿದೆ.   ಮುಂದಿನ ವರ್ಷ ಸಿದ್ಧವಾಗಲಿದೆ. ಮುಂದಿನ ವರ್ಷದಿಂದಲೇ‌‌ ಶೂಟಿಂಗ್ ಮಾಡೋದಕ್ಕೆ ಅವಕಾಶ ನೀಡಲಾಗುವುದು. ಇಂದು ಫಿಲ್ಮ್ ಸಿಟಿಯ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿದ್ದಾರೆ. ಉಮಾಪತಿಯವರು ಹೆಬ್ಬುಲಿ, ಮದಗಜ ಸೇರಿದಂತೆ ಹಲವು ಸಿನಿಮಾಗಳನ್ನು ಬಂಡವಾಳ ಹಾಕಿದ್ದಾರೆ.