ಲೇಡಿ ಸಿಂಗಂ ಆಗಲು ಹೋಗಿ ವ್ಯಾಪಕ ಟೀಕೆಗೆ ಗುರಿಯಾದ ಬಿಲ್ಡಪ್ ಪಾರ್ವತಮ್ಮ

Sep 1, 2019, 7:40 PM IST

ತುಮಕೂರು, [ಸೆ.01]: ರೌಡಿ ಶೀಟರ್‌ಗಳ ಪರೇಡ್ ವೇಳೆ ತುಮಕೂರಿನ ಸಿಪಿಐ ಪಾರ್ವತಮ್ಮ ಲೇಡಿ ಸಿಂಗಂ ಆಗಲು ಹೋಗಿ ವ್ಯಾಪಕ ಟೀಕೆಗೆ ಒಳಗಾಗಿದ್ದಾರೆ. ರೌಡಿ ಶೀಟರ್‌ಗಳಿಗೆ ಎಲ್ಲಾ ಸರ್ವಾಂಗಗಳನ್ನ ಮುಚ್ಚಿಕೊಂಡಿರಬೇಕು ಅಂತೆಲ್ಲಾ ಅಸಭ್ಯ ಮಾತುಗಳಿಂದ ಹಿಗ್ಗಾಮುಗ್ಗಾ ಬೈದಿದ್ದಾರೆ. ಈ ಬಿಲ್ಡಪ್ ಪಾರ್ವತಮ್ಮನ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾದ್ರೆ ಬಿಲ್ಡಪ್ ಪಾರ್ವತಮ್ಮನ ನುಡಿಮುತ್ತುಗಳು ಹೇಗಿವೆ ಅಂತ ಅವರ ಬಾಯಿಂದಲೇ ಕೇಳಿ.