ಸೂರಿಲ್ಲ, 35 ವರ್ಷಗಳಿಂದ ಬೆಟ್ಟದ ಗುಹೆಯೊಳಗೆ ವಾಸ..!

Feb 19, 2020, 4:26 PM IST

ತುಮಕೂರು(ಫೆ.19): ಇಂದಿನ ಕಾಲದಲ್ಲಿ ಮನೆ ಇಲ್ಲದೆ, ಬೆಟ್ಟದ ಮೇಲೆ ಶೆಡ್ ಮಾಡಿ ಜೀವಿಸುತ್ತಾರೆ ಎಂದರೆ ನಂಬುತ್ತೀರಾ..? ತುಮಕೂರಿನಲ್ಲಿ ಸುಮಾರು 35 ವರ್ಷಗಳಿಂದ ತಿಮ್ಮಣ್ಣ ನಾಗಮ್ಮ ದಂಪತಿ ಸೂರಿಲ್ಲದೆ ಬದುಕುತ್ತಿದ್ದಾರೆ.

ನೀರು ತರೋದಿಕ್ಕೆ ಬೆಟ್ಟ ಇಳಿದು ಹೋಗಿ ನೀರು ತರಬೇಕು. ನಿತ್ಯವೂ ಮೇಲಿನಿಂದ ಕೆಳಗೆ, ಕೆಳಗಿನಿಂದ ಮೇಲೆ ನಡೆಯಲೇ ಬೇಕು. ಇವರ ಬಳಿ ರೇಷನ್ ಕಾರ್ಡ್ ಇದ್ದರೂ ಮನೆ ಮಾತ್ರ ಸಿಕ್ಕಿಲ್ಲ. ಗುಹೆಯೊಳಗೆ ಬಗ್ಗಿಕೊಂಡೇ ಇವರು ಕೆಲಸ ಮಾಡುತ್ತಾರೆ. ದಿನನಿತ್ಯ ಬಳಕೆ ವಸ್ತು ಕೊಳ್ಳಲೂ ಬೆಟ್ಟ ಇಳಿಯುವುದು ಹತ್ತುವುದು ತಪ್ಪುತ್ತಿಲ್ಲ. ಸೂರಿಲ್ಲದ ಬಡ ದಂಪತಿಯ ನೋವಿನ ಕಥೆ ಬಿಗ್ 3ಯಲ್ಲಿ.