ಸಖತ್‌ ವೈರಲ್‌ ಆಗುತ್ತಿದೆ ಉತ್ತರ ಕರ್ನಾಟಕ ಭಾಷಾ ಶೈಲಿಯ ಕೊರೋನಾ ಸಾಂಗ್‌..!

Apr 22, 2020, 11:49 AM IST

ಹುಬ್ಬಳ್ಳಿ(ಏ.22): ಕೊರೋನಾ ಕುರಿತಾಗಿ ಹುಬ್ಬಳ್ಳಿ ಹುಡುಗನೊಬ್ಬ ಮಾಡಿರುವ ಕೊರೋನಾ ನೀ ಬಿಟ್ಹೋಗು ನಮ್ಮೂರ್ನಾ ಎಂಬ ರ್ಯಾಪ್ ಹಾಡು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಕೊರೋನಾ ಕುರಿತ ಜಾಗೃತಿಯನ್ನು ಒಳಗೊಂಡ ಈ ಹಾಡು ಯುವಕರ ಬಾಯಲ್ಲಿ ಗುನುಗುತ್ತಿದೆ.

ಇಡೀ ಜಗತ್ತಿಗೆ ಕೊರೋನಾ ಆತಂಕವಾದ್ರೆ ಬಳ್ಳಾರಿಗೆ ಡೆಂಗ್ಯೂ ಕಾಟ: ಆತಂಕದಲ್ಲಿ ಜನತೆ

ನಗರದ ಗೋಪನಕೊಪ್ಪ ಬಳಿಯ ಜೆ‌.ಕೆ. ಸ್ಕೂಲ್ ಬಳಿಯ ನಿವಾಸಿ ಕಿರಣ ಬಿ. ಮಠದ ಈ ಆಲ್ಬಮ್‌ ಮಾಡಿದ್ದಾರೆ. ಉತ್ತರ ಕರ್ನಾಟಕ ಶೈಲಿಯ ರ್ಯಾಪ್ ಹಾಡು ಇದಾಗಿದ್ದು, ಜನಪ್ರಿಯತೆ ಗಳಿಸುತ್ತಿದೆ. ಕೊರೋನಾ ಲಾಕ್ ಡೌನ್ ಬಳಿಕ ಈ ವಿಡಿಯೋ ಮಾಡಿದ್ದಾರೆ.