Sep 26, 2024, 5:26 PM IST
ಬೆಳಗಾವಿ (ಸೆ.26): ಕುಡಿದು ಅಟ್ಟಹಾಸ ಮೆರೆಯುತ್ತಿದ್ದ ಅಳಿಯನಿಗೆ ಅತ್ತೆಯೊಬ್ಬಳು ಗೂಸಾ ನೀಡಿರುವ ಘಟನೆ ಬೆಳಗಾವಿ ತಾಲೂಕಿನ ಶಿಂಧೊಳ್ಳಿ ಕ್ರಾಸ್ ಬಳಿ ನಡೆದಿದೆ. ಕುಡಿದ ಮತ್ತಿನಲ್ಲಿ ತೇಲಾಡುತ್ತಿದ್ದ ಅಳಿಯನನ್ನು ಮನೆಗೆ ಕರೆದುಕೊಂಡು ಹೋಗಲು ಮಗಳು ಮತ್ತು ಅತ್ತೆ ಹರಸಾಹಸಪಟ್ಟಿದ್ದಾರೆ. ಕೊನೆಗೆ ಸಾಧ್ಯವಾಗದಿದ್ದಾಗ ರೊಚ್ಚಿಗೆದ್ದ ಅತ್ತೆ, ನಡುಬೀದಿಯಲ್ಲೇ ಕುಡುಕ ಅಳಿಯನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾಳೆ.
ವಿಶ್ವದ ಅತಿ ಹೆಚ್ಚು ಸಾಲ ಹೊಂದಿರುವ ಟಾಪ್ 10 ದೇಶಗಳು, ಪಾಕ್‌ನ ಸ್ಥಾನವೆಷ್ಟು?
ದಿನಾಲು ಕುಡಿದು ಬರುತ್ತಿದ್ದ ಈತನ ರಂಪಾಟ ಒಂದೆರೆಡಲ್ಲ. ಹೇಗಾದರೂ ಮಾಡಿ ಮನೆಗೆ ಕರೆದುಕೊಂಡು ಹೋಗಬೇಕೆಂದು ಪತ್ನಿ ಮತ್ತು ಅತ್ತೆ ಪ್ರಯತ್ನಪಟ್ಟಿದ್ದು, ಈ ವೇಳೆ ಆತನನ್ನು ಕರೆದೊಯ್ಯಲು ಕಷ್ಟವಾಗಿದೆ. ಈ ವೇಳೆ ಸಿಟ್ಟಿಗೆದ್ದು ಕುಡುಕ ಅಳಿಯನಿಗೆ ಕಪಾಳಮೋಕ್ಷ ಮಾಡಿದ ಅತ್ತೆ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಕುಡುಕನ ಆವಾಂತರಕ್ಕೆ ಸ್ಥಳೀಯರು ಹೈರಾಣು ಆಗಿದ್ದು, ಕುಡುಕನಿಗೆ ಹಿಗ್ಗಾಮುಗ್ಗಾ ಥಳಿಸುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.