Mandya: ಆರೂವರೆ ಕೋಟಿ ಖರ್ಚು ಮಾಡಿ ಕಳಪೆ ಕಾಮಗಾರಿ: ಗ್ರಾಮಸ್ಥರ ಆಕ್ರೋಶ

Feb 3, 2022, 10:38 AM IST

ಮಂಡ್ಯ (ಫೆ.03): ಜಿಲ್ಲೆಯ ನಾಲ್ಕೈದು ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟು ಬಹಳ ವರ್ಷಗಳೇ ಕಳೆದಿತ್ತು. ಗ್ರಾಮಸ್ಥರ ಹಲವು ವರ್ಷದ ಬೇಡಿಕೆಯಿಂದ ಕೊನೆಗೂ ರಸ್ತೆ ಅಭಿವೃದ್ಧಿಗೆ ಆರೂವರೆ ಕೋಟಿ‌ ರೂಪಾಯಿ ಅನುದಾನ‌ ಬಿಡುಗಡೆಯಾಗಿತ್ತು. ಅದರಂತೆ ರಸ್ತೆ ಕೂಡ ನಿರ್ಮಾಣವಾಗಿತ್ತು. ಆದರೆ ಇದೀಗ ಆ ರಸ್ತೆ ಕಾಮಗಾರಿ ವಿಚಾರವಾಗಿ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ಹೊಸದಾಗಿ ನಿರ್ಮಾಣ ಆಗಿರೋ ರಸ್ತೆಯ ಕಳಪೆ ಕಾಮಗಾರಿ ನೋಡಿ ಶಾಕ್ ಆಗಿದ್ದಾರೆ. 

ಮಾದೇಗೌಡ ಅಭಿಮಾನಿಗಳಿಂದ ಪ್ರತಿಭಟನೆ, ಕ್ಷಮೆಯಾಚನೆಗೆ ಪಟ್ಟು

ಹೌದು! ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ಬರೋಬ್ಬರಿ ಆರೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ 8 ಕಿಲೋ ಮೀಟರ್ ರಸ್ತೆ ಅಭಿವೃದ್ದಿಪಡಿಸಲಾಗಿದೆ. ಆದರೆ ರಸ್ತೆಯಾಗಿ 6 ತಿಂಗಳು ಕಳೆಯುವಷ್ಟರಲ್ಲಿ ಕಳಪೆ ಕಾಮಗಾರಿಯ ನಿಜ ರೂಪ ಬಯಲಾಗಿದೆ. ಇದರಿಂದ ಗುತ್ತಿಗೆದಾರ ಮತ್ತು ಅಧಿಕಾರಿಗಳ ವಿರುದ್ಧ ಜನ ಆಕ್ರೋಶ ಹೊರಹಾಕುತ್ತಿದ್ದಾರೆ. ಇನ್ನು ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರ ರಾಘವೇಂದ್ರನ ವಿರುದ್ಧ ಗ್ರಾಮಸ್ಥರು ಡಾಂಬಾರ್ ಕಿತ್ತುಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.