ಕೋಟಿ ಬೇಟೆಯಲ್ಲಿ ಡಿಕೆ ಟಾರ್ಗೆಟ್ ಆಗಿದ್ದೇಕೆ..? ಕಾಂಟ್ಯಾಕ್ಟರ್ ಮನೆಯಲ್ಲಿ ಸಿಕ್ಕ ಹಣ ಯಾರದ್ದು..?

ಕೋಟಿ ಬೇಟೆಯಲ್ಲಿ ಡಿಕೆ ಟಾರ್ಗೆಟ್ ಆಗಿದ್ದೇಕೆ..? ಕಾಂಟ್ಯಾಕ್ಟರ್ ಮನೆಯಲ್ಲಿ ಸಿಕ್ಕ ಹಣ ಯಾರದ್ದು..?

Published : Oct 15, 2023, 01:02 PM IST

2 ಕೋಟಿ ಐಟಿ ಬೇಟೆಯ ಸುತ್ತ 42 ರಹಸ್ಯ..!
ಕೋಟಿ ಬೇಟೆಯಲ್ಲಿ ಡಿಕೆ ಟಾರ್ಗೆಟ್ ಆಗಿದ್ದೇಕೆ..?
42 ಕೋಟಿಗಳ ಕುತ್ತು..ಯಾರಿಗೆ ಕಾದಿದೆ ಆಪತ್ತು..?

ರಾಜ್ಯದಲ್ಲಿ ನಡೆದ ಐಟಿ ದಾಳಿಗಳಲ್ಲೇ ಇದು ಭರ್ಜರಿ ಬೇಟೆ. ಗುತ್ತಿಗೆದಾರನ(Contractors) ಮನೆಯ ಮಂಚದ ಕೆಳಗೆ ಐಟಿ ಅಧಿಕಾರಿಗಳಿಗೆ ಸಿಕ್ಕಿರೋದು ಬರೋಬ್ಬರಿ 42+ ಕೋಟಿ ರೂಪಾಯಿ. 42 ಗಂಟೆಗಳ ಮೆಗಾ ಆಪರೇಷನ್‌ನಲ್ಲಿ ಬಯಲಾಗಿದೆ ಕುರುಡು ಕಾಂಚಾಣ ಮಹಿಮೆ. ಬೆಂಗಳೂರಿನ(Bengaluru) ಗುತ್ತಿಗೆದಾರ ಕಮ್ ಉದ್ಯಮಿ, ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷನಾಗಿದ್ದ ಅಂಬಿಕಾಪತಿಯ(Ambikapati) ಕೋಟಿ ಸಾಮ್ರಾಜ್ಯದ ಮೇಲೆ ಗುರುವಾರ ಸಂಜೆ ಆದಾಯ ಇಲಾಖೆ ಅಧಿಕಾರಿಗಳು ದಾಳಿ (It Raid) ನಡೆಸಿದ್ರು. ಬೆಂಗಳೂರಿನ ಕಾವಲ್‌ಭೈರಸಂಧ್ರದ ಗಣೇಶ ಬ್ಲಾಕ್‌ನಲ್ಲಿರುವ ಅಂಬಿಕಾಪತಿ ಮನೆ, ಆರ್.ಟಿ ನಗರದ ವೈಟ್ ಹೌಸ್‌ನಲ್ಲಿರುವ ಪುತ್ರನ ಮನೆ, ಮಾನ್ಯತಾ ಟೆಕ್ ಪಾರ್ಕ್ ಬಳಿ ಇರೋ ಮಗಳ ಮನೆ.ಹೀಗೆ ಅಂಬಿಕಾಪತಿಗೆ ಸೇರಿದ 3 ಸ್ಥಳಗಳಲ್ಲಿ ತಲಾಷ್ ನಡೆಸಿದ ಐಟಿ ಅಧಿಕಾರಿಗಳಿಗೆ ಸಿಕ್ಕಿರೋದು ಸಣ್ಣ ಮೊತ್ತವಲ್ಲ. ಅಂಬಿಕಾಪತಿ ಮಗನ ಮನೆಯ ಮಂಚದ ಕೆಳಗಂತೂ 22 ಬಾಕ್ಸ್‌ಗಳಲ್ಲಿ ತುಂಬಿಡಲಾಗಿದ್ದ ಗರಿ ಗರಿ ನೋಟುಗಳನ್ನು ಐಟಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಲೆಕ್ಕ ಹಾಕಿ ನೋಡಿದಾಗ ಸಿಕ್ಕಿರೋ ಹಣ 42 ಕೋಟಿಗೂ  ಹೆಚ್ಚು. ಆದರೆ ಈ ಐಟಿ ದಾಳಿಗೂ ಗುತ್ತಿಗೆದಾರ ಅಂಬಿಕಾಪತಿಗೂ ಯಾವುದೇ ಸಂಬಂಧ ಇಲ್ಲ ಅಂತಿದ್ದಾರೆ ಪುತ್ರ ಪ್ರದೀಪ್. ಐಟಿ ದಾಳಿ ಹೀಗೆ ಬಾಕ್ಸ್‌ಗಳಲ್ಲಿ ಕೋಟಿ ಕೋಟಿ, ಗರಿಗರಿ ನೋಟುಗಳ ಕಂತೆ ಸಿಕ್ಕಿರೋದು ಇದೇ ಪ್ರದೀಪ್ ಮನೆಯಲ್ಲಿ. ಅಂಬಿಕಾಪತಿ 20 ವರ್ಷಗಳ ಹಿಂದೆಯೇ ಕಾಂಟ್ರಾಕ್ಟರ್ ಕೆಲಸ ಬಿಟ್ಟಿದ್ರಂತೆ. ನಂತ್ರ ಆ ವೃತ್ತಿಯನ್ನು ಪುತ್ರ ಪ್ರದೀಪ್ ಮುಂದುವರಿಸಿದ್ದಾರೆ. ಪ್ರಮೋದ್ ಎಂಬ ಸ್ನೇಹಿತನ ಜೊತೆ ಸೇರಿ ಪ್ರದೀಪ್ ಗುತ್ತಿಗೆದಾರ ಕೆಲಸ ಮಾಡ್ತಾ ಇದ್ರು.

ಇದನ್ನೂ ವೀಕ್ಷಿಸಿ:  ಬಸವನಗುಡಿ ವಾರ್ಡ್‌ ಹೆಸರು ಬದಲಾವಣೆ: ಹೋರಾಟದ ಎಚ್ಚರಿಕೆ ನೀಡಿದ ನಿವಾಸಿಗಳು

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more