ರಾಯಚೂರಿಗೆ ಏಮ್ಸ್‌ ಬೇಕೇ ಬೇಕು, 5 ಸಾವಿರಕ್ಕೂ ಹೆಚ್ಚಿನ ಜನರಿಂದ ರಕ್ತದಲ್ಲಿ ಸಹಿ ಹೋರಾಟ

Jul 9, 2022, 2:10 PM IST

ರಾಯಚೂರು (ಜು. 09): ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್‌)ಯನ್ನು ರಾಯಚೂರು ಜಿಲ್ಲೆಗೆ ಮಂಜೂರು ಮಾಡಬೇಕು, ಆ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಹೋರಾಟ ಮುಂದುವರೆದಿದೆ. ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ತರಗತಿ ಬಿಟ್ಟು ಪ್ರತಿಭಟನೆ ಕುಳಿತಿದ್ದಾರೆ. 

BIG 3 Hero: ಗೋರಗುಂಟೆ ಪಾಳ್ಯದಲ್ಲಿ ಮೊಬೈಲ್ ಶೌಚಾಲಯ ನಿರ್ಮಿಸಿ ಮಾದರಿಯಾದ ಪಿಎಸ್‌ಐ ಶಾಂತಪ್ಪ

'ರಾಯಚೂರಿನಲ್ಲಿ ಹೆಲ್ತ್ ಕೇರ್ ವ್ಯವಸ್ಥೆ ಕಡಿಮೆ. ಇಲ್ಲಿ ಆರೋಗ್ಯದಲ್ಲಿ ಏರುಪೇರಾದರೆ ನಮ್ಮಲ್ಲಿ ಟ್ರೀಟ್‌ಮೆಂಟ್‌ಗೆ ವ್ಯವಸ್ಥೆ ಇಲ್ಲ, ಹೈದರಾಬಾದ್‌ಗೆ ಕರ್ಕೊಂಡು ಹೋಗಬೇಕು, ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ, ನಮಗೆ ಏಮ್ಸ್‌ ಬೇಕೇ ಬೇಕು ಎಂದು ಮೆಡಿಕಲ್ ವಿದ್ಯಾರ್ಥಿಗಳು, ಉಪನ್ಯಾಸಕರು ಒತ್ತಾಯಿಸಿದ್ದಾರೆ. 

ಚಳವಳಿಯ ಸ್ವರೂಪವನ್ನು ತೀವ್ರ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಉದ್ದೇಶದಿಂದಾಗಿ 5 ಸಾವಿರಕ್ಕೂ ಹೆಚ್ಚಿನ ಜನರಿಂದ ರಕ್ತವನ್ನು ಸಂಗ್ರಹಿಸಿ ಸಹಿ ಪಡೆದು ಆ ಪತ್ರವನ್ನು ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ತಲುಪಿಸುವ ವಿನೂತನ ಹೋರಾಟ ಕೂಡಾ ನಡೆಯಿತು.