ಕೊರೋನಾ ಹಾಟ್‌ಸ್ಪಾಟ್ ಬೆಂಗಳೂರಲ್ಲಿ 2 ಲಕ್ಷ ಪಾಸ್ ವಿತರಣೆ, ಅಪಾಯ ಆಹ್ವಾನ

Apr 18, 2020, 3:42 PM IST

ಬೆಂಗಳೂರು(ಏ.18): ಬೆಂಗಳೂರು ಹೆಚ್ಚು ಅಲರ್ಟ್ ಆಗಿರುವ ಅವಶ್ಯಕತೆ ಇದ್ದರೂ, ಜನ ಮಾತ್ರ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಪಾಸ್ ಕೊಟ್ಟು ಅದರಿಂದಲೇ ಬೆಂಗಳೂರಿಗೆ ಅಪಾಯ ಆಹ್ವಾನಿಸಲಾಗುತ್ತಿದೆ.

ಕೊರೋನಾ ಹಾಟ್‌ಸ್ಪಾಟ್ ಎಂದು ಘೋಷಿಸಲಾಗಿರುವ ಬೆಂಗಳೂರಿನಲ್ಲಿ ಜನ ಮೈಮರೆತು ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಸುಮಾರು 2 ಲಕ್ಷಕ್ಕೂ ಹೆಚ್ಚು ಪಾಸ್‌ಗಳನ್ನು ವಿತರಿಸಲಾಗಿದ್ದು, ಹೇಮಂತ್ ನಿಂಬಾಳ್ಕರ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ  ಹೇಮಂತ್ ನಿಂಬಾಳ್ಕರ್ ಟ್ವೀಟ್ ಮಾಡಿ 2 ಲಕ್ಷ ಪಾಸ್ ವಿತರಿಸಿರುವುದಾಗಿ ಟ್ವೀಟ್ ಮಾಡಿದ್ದಾರೆ.

ಎಮರ್ಜೆನ್ಸಿ ಅವಶ್ಯಕತೆಗಾಗಿ ಜನ ಬೇಕಾಬಿಟ್ಟಿ ಪಾಸ್ ಪಡೆದು ಓಡಾಡುತ್ತಿರುವುದು ಬೆಂಗಳೂರಿಗೆ ಅಪಾಯ ಆಹ್ವಾನಿಸಿದಂತಾಗಿದೆ.