ಬಾಗಲಕೋಟೆಗೆ ಬಡಿದ ಕೊರೋನಾ ಬರಸಿಡಿಲು: ಒಂದೇ ದಿನ 13 ಮಂದಿಗೆ ಸೋಂಕು..!

May 6, 2020, 3:21 PM IST

ಬಾಗಲಕೋಟೆ(ಮೇ.06):  ಇಂದು(ಬುಧವಾರ) ಒಂದೇ ದಿನ ಜಿಲ್ಲೆಯಲ್ಲಿ 13 ಮಂದಿಗೆ ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಇದರಿಂದ ಜಿಲ್ಲಾದ್ಯಂತ ಭಯದ ವಾತಾವರಣ ನಿರ್ಮಾಣವಾಗಿದೆ. ಜಿಲ್ಲೆಯ ಬಾದಾಮಿ ತಾಲೂಕಿನ ಡಾನಕಶಿರೂರು ಗ್ರಾಮದ ಗರ್ಭಿಣಿಯಿಂದ ಒಟ್ಟು 12 ಜನರಿಗೆ ಕೊರೋನಾ ಸೋಂಕು ತಗುಲಿದೆ. 

ಗರ್ಭಿಣಿಗೆ ಕೊರೋನಾ ಸೋಂಕು ದೃಢ: BTM ಲೇಔಟ್‌ನ ಇಕೋಬಾ ನಗರ ಸೀಲ್‌ಡೌನ್‌

ಜಿಲ್ಲೆಯಲ್ಲಿ ಇಂದು ಒಂದೇ ದಿನ ಬರೋಬ್ಬರಿ 13 ಮಂದಿಗೆ ಕೊರೋನಾ ಬಂದಿದೆ. ಡಾನಕಶಿರೂರು ಗ್ರಾಮದ 12 ಮಂದಿಗೆ ಕೋವಿಡ್‌ ವೈರಸ್‌ ತಗುಲಿದೆ. ಹೀಗಾಗಿ ಇಡೀ ಗ್ರಾಮ ಹಾಗೂ ಜಿಲ್ಲೆಯ ಜನರಿಗೆ ಆತಂಕ ಶುರುವಾಗಿದೆ.