Dec 26, 2023, 2:55 PM IST
ಆರ್ಟಿಕಲ್ 370 ಹಾಗೂ 35ಎ, ಈ ಎರಡೂ ಕಂಟಕಗಳನ್ನೂ ತೆಗೆದು ಹಾಕಿದ ಮೇಲೆ, ಕಣಿವೆ ರಾಜ್ಯ ಶಾಂತವಾಗಿತ್ತು. ಜಮ್ಮು ಹಾಗೂ ಕಾಶ್ಮೀರದ(Jammu and Kashmir) ಜನಕ್ಕೆ, ಅಭಿವೃದ್ಧಿ ಅಂದ್ರೆ ಹೇಗಿರುತ್ತೆ, ಅಭಿವೃದ್ಧಿ ಹೊಂದಿದರೆ ಏನಾಗುತ್ತೆ ಅನ್ನೋದು ಅರ್ಥವಾಗ್ತಾ ಇತ್ತು. ಪಾಕಿಸ್ತಾನವಂತೂ(Pakistan) ಕಾಶ್ಮೀರದ ವಿಷಯದಲ್ಲಿ ಕೈಹಾಕೋದಕ್ಕಾಗದೆ ವಿಲವಿಲ ಅಂತ ವದ್ದಾಡಿತ್ತು. ಉಗ್ರವಾದ ಅನ್ನೋ ಕಾಶ್ಮೀರದಲ್ಲಿ ಅಕ್ಷರಶಃ ಹಿಮಸಮಾಧಿ ಹೊಂದಿತ್ತು. ಆದ್ರೆ ಈಗ ಕಾಶ್ಮೀರದಲ್ಲಿ ಮತ್ತೆ ಕೋಲಾಹಲ ಶುರುವಾಗಿದೆ. ಉಗ್ರರು ಮತ್ತೆ ಉಪಟಳ ಕೊಡೋಕೆ ಆರಂಭಿಸಿದ್ದಾರೆ. ಉಗ್ರಕೃತ್ಯಕ್ಕೆ ಭಾರತ ಸೇನೆ ಸಂಹಾರದ ಪ್ರತ್ಯುತ್ತರವನ್ನೇ ಕೊಡೋದು ಅಂತ ಗೊತ್ತಿದ್ದಾಗಲೂ ಹುಚ್ಚು ಸಾಹಸಕ್ಕೆ ಪಾಕಿಸ್ತಾನದ ಉಗ್ರರು ಸನ್ನದ್ಧರಾಗ್ತಾ ಇದಾರೆ. ಇಲ್ಲಿ ಚಿರನಿದ್ರೆಗೆ ಜಾರಿರೋ ವ್ಯಕ್ತಿ, ನಿವೃತ್ತ ಪೊಲೀಸ್ ಅಧಿಕಾರಿ. ಹೆಸರು ಮಹಮ್ಮದ್ ಶಫಿ. ಇದೇ ಭಾನುವಾರ ಜಮ್ಮು-ಕಾಶ್ಮೀರದ ಬಾರಾಮುಲ್ಲಾದ ಮಸೀಯೊಂದರಲ್ಲಿ ಪ್ರಾರ್ಥನೆ ಸಲ್ಲಿಸ್ತಾ ಇದ್ದಾಗಲೇ ಇವರ ಮೇಲೆ ಉಗ್ರರ ದಾಳಿ ನಡೆದಿತ್ತು. ಉಗ್ರರು ಹಾರಿಸಿದ ಗುಂಡು, ಶಫಿ ಅವರ ಮೃತ್ಯುವಿಗೆ ಕಾರಣವಾಗಿತ್ತು. ಈ ದಾಳಿ ಇದ್ಯಲ್ಲಾ, ಇದು ಮೇಲ್ನೋಟಕ್ಕೆ ಭಾರತೀಯ(Indian army) ಸೇನೆಯ ಮೇಲೆ ಉಗ್ರರು ಕೈಗೊಂಡ ಪ್ರತೀಕಾರದ ಹಾಗೆ ಕಾಣ್ತಾ ಇದೆ. ಯಾಕಂದ್ರೆ ಕಳೆದೊಂದು ವಾರದಿಂದ, ಸೇನೆ ಉಗ್ರರ ತಲಾಷ್ ಮಾಡ್ತಾ ಇತ್ತು. ಅಷ್ಟೇ ಅಲ್ಲ, ಈ ಘಟನೆ ನಡೆಯೋ ಒಂದು ದಿನ ಮುಂಚೆ, ಅಂದ್ರೆ ಕಳೆದ ಶನಿವಾರ ಭಾರತೀಯ ಸೇನೆ ಪಾಕಿಸ್ತಾನದ ಉಗ್ರರ ದೊಡ್ಡ ಸಂಚೊಂದನ್ನ ದಮನಗೊಳಿಸಿತ್ತು.
ಇದನ್ನೂ ವೀಕ್ಷಿಸಿ: ಬಂಟ್ವಾಳದ ತುಂಬೆ ಡ್ಯಾಂಗೆ ರೈತರ ಮುತ್ತಿಗೆ: ಕೃಷಿ ಭೂಮಿ ನೀರು ಪಾಲು.. 9 ಕುಟುಂಬಗಳು ಕಂಗಾಲು