ಡಿ. 13, 2001ರಂದು ಸಂಸತ್ ಮೇಲೆರಗಿದ್ದರು ಐವರು ಉಗ್ರರು..! ಅದೇ ದಿನ ಮತ್ತೆ ನಡುಗಿತು ಲೋಕಸಭೆ..!

ಡಿ. 13, 2001ರಂದು ಸಂಸತ್ ಮೇಲೆರಗಿದ್ದರು ಐವರು ಉಗ್ರರು..! ಅದೇ ದಿನ ಮತ್ತೆ ನಡುಗಿತು ಲೋಕಸಭೆ..!

Published : Dec 14, 2023, 03:44 PM IST

ಲೋಕಸಭೆ ಇತಿಹಾಸದಲ್ಲೇ ಕಂಡು ಕೇಳರಿಯದ ಭದ್ರತಾ ವೈಫಲ್ಯ..!
22 ವರ್ಷಗಳ ಹಿಂದಿನ ಕರಾಳ ಘಟನೆ,ಅದೇ ದಿನ ಮಹಾ ಪ್ರಮಾದ..!
ಸಂಸತ್ ಒಳಗೆ ನುಗ್ಗಿದ ಅಪರಿಚಿತರು ಯಾರು?ಏನು ಅವರ ಟಾರ್ಗೆಟ್ ?

22 ವರ್ಷಗಳ ನಂತರ ಇಡೀ ದೇಶ ಮತ್ತೊಮ್ಮೆ ಬೆಚ್ಚಿ ಬಿದ್ದಿದೆ. 2 ದಶಕಗಳ ಹಿಂದಿನ ಆ ಕರಾಳ ಘಟನೆಯನ್ನು ಮತ್ತೆ ನೆನಪಿಸಿತು, ಅದೊಂದು ಪ್ರಮಾದ. ಹೊಸ ಸಂಸತ್(Parlimrnt) ಭವನಕ್ಕೇ ನುಗ್ಗಿದರು ಇಬ್ಬರು ಆಗಂತುಕರು. ಲೋಕಸಭೆಯಲ್ಲೇ(Loksabha) ಸ್ಮೋಕ್ ಬಾಂಬ್ ಸಿಡಿಸಿದ್ರು ಅವಳಿ ಅಪರಿಚಿತರು. ಅವತ್ತು ನಡೆದದ್ದು ಮಾರಣಹೋಮ, ಇವತ್ತು ನಡೆದಿರೋದು ಮಹಾಪ್ರಮಾದ. ಸಂಸತ್ ಭವನ ಈ ದೇಶದ ಆಡಳಿತದ ಶಕ್ತಿಕೇಂದ್ರ. ದೇಶಕ್ಕೆ ಏನೇ ಕಾನೂನು ಬಂದ್ರೂ, ವ್ಯವಸ್ಥಗಳು ಬಂದ್ರೂ ಅವೆಲ್ಲದ ಮೂಲ ಸ್ಥಾನ ಅದೇ. ಸಂಸತ್ ಅಂದ್ರೆ ದೇಶದ ಹೆಮ್ಮೆ, ಸಂಸತ್ ಅಂದ್ರೆ ದೇಶದ ಘನತೆ, ಗೌರವ. ಪ್ರಜಾತಂತ್ರ ವ್ಯವಸ್ಥೆಯ ಪ್ರತೀಕ ಈ ಸಂಸತ್. ಅಂಥಾ ಸಂಸತ್'ನೊಳಗೆ ಬುಧವಾರ ನಡೆದದ್ದು ನಿಜಕ್ಕೂ ಇಡೀ ದೇಶವೇ ಬೆಚ್ಚಿ ಬೀಳುವಂಥಾ ಘಟನೆ. ಡಿಸೆಂಬರ್ 13 ಈ ದಿನವನ್ನು ನೆನಪಿಸಿಕೊಂಡ್ರ ಭಾರತದ ಸಂಸತ್ ಒಂದು ಕ್ಷಣ ಬೆಚ್ಚಿ ಬೀಳತ್ತೆ. ಕಾರಣವೂ ಇದೆ. ಅದು ಸಂಸತ್ ಪಾಲಿಗೆ ಕರಾಳ ದಿನ. 22 ವರ್ಷಗಳ ಹಿಂದೆ ಅದೇ ಡಿಸೆಂಬರ್ 13ರ ದಿನ ನಡೆದಿದ್ದ ಘಟನೆಯನ್ನ ದೇಶ ಇನ್ನೂ ಮರೆತಿಲ್ಲ, ಮರೆಯೋದಕ್ಕೆ ಸಾಧ್ಯಾನೂ ಇಲ್ಲ. ಯಾಕಂದ್ರೆ ಆ ಘಟನೆಯೇ ಅಂಥದ್ದು. ಆ ಘಟನೆಗೆ ದಿನಕ್ಕೆ 22 ವರ್ಷ ತುಂಬಿದ ದಿನದಂದೇ ಮತ್ತೊಂದು ಮಹಾಪ್ರಮಾದ ನಡೆದು ಹೋಗಿದೆ.

ಭಾರತದ ಸಂಸತ್ ಅಂದ್ರೆ ಅದೊಂದು ಸರ್ಪಕೋಟೆ. ಅದ್ರಲ್ಲೂ ಇತ್ತೀಚೆಗೆ ಉದ್ಘಾಟನೆಗೊಂಡಿದ್ದ ಸೆಂಟ್ರಲ್ ವಿಸ್ತಾ(Central Vista) ಹೆಸರಿನ ಹೊಸ ಸಂಸತ್ ಭವನವಂತೂ ಅಭೇದ್ಯ ಕೋಟೆ. ಅಲ್ಲಿಗೆ ಸಂಸತ್ ಸದಸ್ಯರು, ಅಧಿಕಾರಿಗಳು, ಮಾಧ್ಯಮದವರು ಬಿಟ್ರೆ, ಬೇರಾರಿಗೂ ಪ್ರವೇಶವೇ ಇಲ್ಲ. ಸಂಸತ್ ಕಲಾಪವನ್ನು ವೀಕ್ಷಿಸಲು ಬರುವವರಿಗೆ ಪಾಸ್ ಇದ್ರೆ ಮಾತ್ರ ಎಂಟ್ರಿ. ಹಾಗೆ ಪಾಸ್ ಇದ್ದವರು ಐದಾರೂ ಭದ್ರತಾ ತಪಾಸಣೆಗಳನ್ನು ಮುಗಿಸಿಯೇ ಒಳಗೆ ಹೋಗ್ಬೇಕು. ಅನುಮತಿ ಇಲ್ಲದೆ ಒಂದು ಸಣ್ಣ ಇರುವೆಯೂ ಒಳ ಹೋಗಲು ಸಾಧ್ಯವಿಲ್ಲ ಅನ್ನುವಷ್ಟರ ಮಟ್ಟಿಗಿನ ಸರ್ಪಕೋಟೆಯಂಥಾ ಭದ್ರತೆ. ಆದ್ರೆ ಆ ಭದ್ರಕೋಟೆಯನ್ನೇ ವಂಚಿಸಿದ ಇಬ್ಬರು ಅಪರಿಚಿತರು, ಬುಧವಾರ ಲೋಕಸಭೆ ಕಲಾಪ ನಡೆಯುತ್ತಿದ್ದ ಸಂಸತ್ ಭವನಕ್ಕೇ ನುಗ್ಗಿ ಬಿಟ್ರು.

ಇದನ್ನೂ ವೀಕ್ಷಿಸಿ:  ಪ್ರೀತಿಸಿ ಮದುವೆಯಾದವಳಿಗೆ ವಿಷ ಉಣಿಸಿದ ಗಂಡ..!ಮುದ್ದೆಯಲ್ಲಿ ಸೈನೈಡ್ ಹಾಕಿದ್ನಾ ಪಾಪಿ ಗಂಡ..?

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more