NPRಗೆ ತಪ್ಪು ಮಾಹಿತಿ ನೀಡಿದ್ರೆ ದಂಡ!

Jan 18, 2020, 7:03 PM IST

ಎನ್ಪಿಆರ್‌ ವಿರುದ್ಧ ದೇಶಾದ್ಯಂತ ಆಕ್ರೋಶ ಮತ್ತು ಅಸಹಕಾರದ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ, ಸಹಕಾರ ನೀಡದವರಿಗೆ ಮತ್ತು ತಪ್ಪು ಮಾಹಿತಿ ನೀಡುವವರಿಗೆ ಒಂದು ಸಾವಿರ ರೂಪಾಯಿ ದಂಡ ವಿಧಿಸಬಹುದಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ.

ಇದನ್ನೂ ನೋಡಿ |ಸಂಸತ್ತಿಗೆ ರಾಹುಲ್ ಯಾಕೆ? ಮಲಯಾಳಿಗಳಿಗೆ ಗುಹಾ ತರಾಟೆ!...

ಪ್ರಾಯೋಗಿಕ ಅನುಭವಗಳನ್ನು ಹಂಚಿಕೊಂಡ ಎನ್ಪಿಆರ್ ಅಧಿಕಾರಿಗಳು, ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್  ಅಥವಾ ಪಾಸ್ಪೋರ್ಟ್ ವಿವರಗಳನ್ನು ಹಂಚಿಕೊಳ್ಳಲು ಯಾರೂ ಕೂಡಾ ಹಿಂದೇಟು ಹಾಕಿಲ್ಲ. ಆದರೆ ಪ್ಯಾನ್‌ ನಂಬರ್‌ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಎಂದರು.

73 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ನಡೆದ ಈ ಸಮೀಕ್ಷೆಯಲ್ಲಿ ಸುಮಾರು 30 ಲಕ್ಷ ಮಂದಿಯ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಆದರೆ ಆಧಾರ್, ವೋಟರ್ ಐಡಿ ಕಾರ್ಡ್, ಪಾಸ್ಪೋರ್ಟ್ ಮತ್ತು ಡ್ರೈವಿಂಗ್ ಲೈಸೆನ್ಸ್ ಸಂಖ್ಯೆಯನ್ನು ಹಂಚಿಕೊಳ್ಳುವುದು ಕಡ್ಡಾಯವಲ್ಲ ಎಂದು ಗೃಹ ಸಚಿವಾಲಯದ ಅಧಿಕಾರಿ ಟ್ವೀಟ್ ಮಾಡಿದ್ದಾರೆ.